Monday, November 25, 2024
ಸುದ್ದಿ

ಅಸಿಸ್ಟೆಂಟ್ ಮದುವೆಯಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಧರಿಸಿದ ಸಾರಿಯ ಬೆಲೆ ಎಷ್ಟು ಗೊತ್ತಾ…! – ಕಹಳೆ ನ್ಯೂಸ್

ನ್ಯಾಷನಲ್ ಕ್ರಷ್ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಸೌತ್ ಇಂಡಿಯಾದ ಸ್ಟಾರ್ ನಟಿ ರಶ್ಮಿಕಾ ತಮ್ಮ ಅಸಿಸ್ಟೆಂಟ್ ಮದುವೆಯಲ್ಲಿ ಸಕತ್ ಆಗಿ ಮಿಂಚಿದ್ದಾರೆ. ನ್ಯಾಷನಲ್ ಕ್ರಷ್ ಅಸಿಸ್ಟೆಂಟ್ ಮದುವೆಯಲ್ಲಿ ಧರಿಸಿದ್ದ ಸಾರಿಯ ಈಗ ಸಕ್ಕತ್ ಚರ್ಚೆಯಾಗುತ್ತಿದ್ದು, ಸಾರಿಯ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!!

ತಮ್ಮ ಬ್ಯಸಿ ಶೆಡ್ಯೂಲ್ ನಲ್ಲೂ ತಮ್ಮ ಅಸಿಸ್ಟೆಂಟ್ ವಿವಾಹಕ್ಕೆ ಆಗಮಿಸಿದ್ದ ರಶ್ಮಿಕಾ, ಬಂಗಾರದ ಬಣ್ಣದ ಸಿಂಪಲ್ ಸಾರಿಯಲ್ಲಿ ಮಿರಮಿರ ಮಿಂಚಿದ್ದು, ರಶ್ಮಿಕಾ ಧರಿಸಿದ್ದ ಸಾರಿಯ ಬೆಲೆ ಬರೋಬ್ಬರಿ 35 ಸಾವಿರ ಎನ್ನಲಾಗುತ್ತಿದೆ. ಸಾರಿಯ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಶ್ಮಿಕಾ ಧರಿಸಿದ್ದ ಸಾರಿಯ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿರುವ ನಡುವೆ ಮದುವೆ ಮನೆಯ ವಿಡಿಯೋ ಒಂದು ಸಕ್ಕತ್ ವೈರಲ್ ಆಗುತ್ತಿದೆ. ತಮ್ಮ ಅಸಿಸ್ಟೆಂಟ್ ಮದುವೆಯಲ್ಲಿ ಭಾಗವಹಿಸಿದ ರಶ್ಮಿಕಾ ಮಂದಣ್ಣ ಅವರ ಆಶೀರ್ವಾದ ಪಡೆಯಲು ವಧು-ವರರು ಮುಂದಾದಾಗ ಆಶ್ಚರ್ಯಕ್ಕೀಡಾದ ರಶ್ಮಿಕಾ ನಾಚಿಕೆಯಿಂದ ಮೊದಲು ವಿಚಲಿತರಾದರು. ಬಳಿಕ ಅವರಿಬ್ಬರನ್ನು ಆಶೀರ್ವದಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು