ಭಾರತದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ಜಿ20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಜಿ20 ನಾಯಕರು ಆಗಮಿಸಲಿದ್ದಾರೆ. ಇನ್ನು ಶೃಂಗಸಭೆಗೂ ಎರಡು ದಿನ ಮುಂಚೆಯೇ ಅಂದರೆ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೊದಲಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಕಾರ್ತಾದಲ್ಲಿ ನಡೆಯಲಿರುವ ಆಸಿಯಾನ್ ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಸೆಪ್ಟೆಂಬರ್ 7ರಂದು ಸಂಜೆ ದೆಹಲಿಗೆ ಮರಳಲಿದ್ದಾರೆ. ಶೃಂಗಸಭೆಯ ಪೂರ್ವಭಾವಿಯಾಗಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ಸೆಪ್ಟೆಂಬರ್ 8ರಂದು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಹೆಚ್ಚಿನ ನಾಯಕರು ಸೆಪ್ಟೆಂಬರ್ 8ರ ಸಂಜೆಯೊಳಗೆ ದೆಹಲಿಗೆ ಆಗಮಿಸುತ್ತಾರೆ.
ಮುಖ್ಯ ಶೃಂಗಸಭೆಯು ಭಾರತ ಮಂಟಪದಲ್ಲಿ ಸೆಪ್ಟೆಂಬರ್ 9ರಂದು ಪ್ರಗತಿ ಮೈದಾನದಲ್ಲಿ ಪ್ರಾರಂಭವಾಗುತ್ತದೆ. ರಿಷಿ ಸುನಕ್, ಇಮ್ಯಾನುಯೆಲ್ ಮ್ಯಾಕ್ರೋನ್, ಓಲಾಫ್ ಸ್ಕೋಲ್ಜ್ ಮತ್ತು ಫ್ಯೂಮಿಯೊ ಕಿಶಿಡಾ ಈ ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವದ ನಾಯಕರ ಪಟ್ಟಿಯಲ್ಲಿದ್ದಾರೆ.
ಆರ್ಥಿಕತೆ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ ಕುರಿತು ಚರ್ಚೆಗಳನ್ನು ಒಳಗೊಂಡಿರುವ ಸಭೆಗಳು ಮತ್ತು ಚರ್ಚೆಗಳು ಸೆಪ್ಟೆಂಬರ್ 9ರಂದು ನಡೆಯಲಿವೆ. ಆಫ್ರಿಕನ್ ಯೂನಿಯನ್ ಔಪಚಾರಿಕವಾಗಿ ಜಿ20ಗೆ ಸೇರುತ್ತದೆ. ಕೂಟವನ್ನು ನಂತರ ಜಿ21 ಎಂದು ಉಲ್ಲೇಖಿಸಲಾಗುತ್ತದೆ.
ಸೆ.10ರಂದು ಬೆಳಗ್ಗೆ ಮತ್ತೆ ನಾಯಕರು ಸಭೆ ಸೇರಿ ಜಂಟಿ ಘೋಷಣೆ ಅಥವಾ ನಾಯಕರ ಹೇಳಿಕೆಯ ಅಂತಿಮ ಕರಡು ಪ್ರಕಟಿಸಲಾಗುವುದು. ನಂತರ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ಗೆ ಹಸ್ತಾಂತರಿಸಲಾಗುವುದು. ಹೆಚ್ಚಿನ ನಾಯಕರು ಸೆಪ್ಟೆಂಬರ್ 10ರ ಸಂಜೆ ಹಾಗೂ ಸೆಪ್ಟೆಂಬರ್ 11ರ ಬೆಳಿಗ್ಗೆ ದೆಹಲಿಯಿಂದ ಹೊರಡುತ್ತಾರೆ.
ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ನಾಯಕರು:
ಅರ್ಜೆಂಟೀನಾ — ಆಲ್ಬರ್ಟೊ ಫೆರ್ನಾಂಡಿಸ್
ಆಸ್ಟ್ರೇಲಿಯಾ – ಆಂಥೋನಿ ಅಲ್ಬನೀಸ್
ಬ್ರೆಜಿಲ್ – ಲೂಯಿಜ್ ಇನಾಸಿಯೊ
ಕೆನಡಾ – ಜಸ್ಟಿನ್ ಟ್ರುಡೊ
ಚೀನಾ–ಲಿ ಚಿಯಾಂಗ್
ಫ್ರಾನ್ಸ್ – ಎಮ್ಯಾನುಯೆಲ್ ಮ್ಯಾಕ್ರನ್
ಜರ್ಮನಿ–ಓಲಾಫ್ ಸ್ಕೋಲ್ಜ್
ಭಾರತ – ನರೇಂದ್ರ ಮೋದಿ
ಇಂಡೋನೇಷ್ಯಾ – ಜೋಕೊ ವಿಡೋಡೋ
ಇಟಲಿ –ಜಾರ್ಜಿಯಾ ಮೆಲೋನಿ
ಜಪಾನ್ — ಫ್ಯೂಮಿಯೋ ಕಿಶಿಡಾ
ಮೆಕ್ಸಿಕೋ — ಆಂಡ್ರೆಸ್ ಮ್ಯಾನುಯೆಲ್
ದಕ್ಷಿಣ ಕೊರಿಯಾ – ಯೂನ್ ಸುಕ್ ಯೆಯೋಲ್
ರಷ್ಯಾ – ಸೆರ್ಗೆ ಲಾವ್ರೊವ್
ಸೌದಿ ಅರೇಬಿಯಾ – ಮುಹಮ್ಮದ್ ಬಿನ್ ಸಲ್ಮಾನ್
ದಕ್ಷಿಣ ಆಫ್ರಿಕಾ – ಸಿರಿಲ್ ರಾಮಫೋಸಾ
ಟರ್ಕಿ – ಆರ್ಸಿ ಎರ್ಡೋಗನ್
ಯುನೈಟೆಡ್ ಕಿಂಗ್‌ಡಮ್ — ರಿಷಿ ಸುನಕ್
ಯುನೈಟೆಡ್ ಸ್ಟೇಟ್ಸ್ — ಜೋ ಬಿಡೆನ್
ಯುರೋಪಿಯನ್ ಯೂನಿಯನ್–ಚಾರ್ಲ್ಸ್ ಮೈಕೆಲ್
ಇನ್ನು ಜಿ20 ಶೃಂಗಸಭೆಗೆ ಚೀನಾದ ಅಧ್ಯಕ್ಷ ಕ್ಸಿಜಿಂಪಿAಗ್ ಹಾಜರಾಗುವುದಿಲ್ಲ. ಚೀನಾದ ನಿಯೋಗದ ನೇತೃತ್ವವನ್ನು ಪ್ರೀಮಿಯರ್ ಲಿ ಕ್ವಿಯಾಂಗ್ ವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ಘೋಷಿಸಿದೆ.
`ಭಾರತ ಸರಕಾರದ ಆಹ್ವಾನದ ಮೇರೆಗೆ, ಹೊಸದಿಲ್ಲಿಯಲ್ಲಿ ಸೆಪ್ಟಂಬರ್ 9 ಮತ್ತು 10ರಂದು ನಡೆಯಲಿರುವ 18ನೇ ಜಿ20 ಶೃಂಗಸಭೆಯಲ್ಲಿ ರಾಷ್ಟ್ರೀಯ ಕೌನ್ಸಿಲ್ನ ಪ್ರೀಮಿಯರ್ ಲಿ ಕ್ವಿಯಾಂಗ್ ಪಾಲ್ಗೊಳ್ಳಲಿದ್ದಾರೆ’ ಎಂದು ಚೀನೀ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಹೇಳಿಕೆ ನೀಡಿದ್ದಾರೆ. ಭಾರತ ಮೊದಲ ಬಾರಿಗೆ ಆಯೋಜಿಸಿರುವ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಅಧ್ಯಕ್ಷ ಜಿಂಪಿoಗ್ ಗೈರು ಹಾಜರಾಗಲು ಕಾರಣವೇನು ಎಂಬ ಬಗ್ಗೆ ಇಲಾಖೆ ಮಾಹಿತಿ ನೀಡಿಲ್ಲ.