Thursday, January 23, 2025
ಸುದ್ದಿ

ಗ್ರಾ.ಪಂ. ಮಾಜಿ ಸದಸ್ಯನ ಮನೆಯವರನ್ನು ಕಟ್ಟಿ ಹಾಕಿ ದರೋಡೆ : ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಭೇಟಿ – ಕಹಳೆ ನ್ಯೂಸ್

ಪುತ್ತೂರು : ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ.


ಬಡಗನ್ನೂರು ಕುಡ್ಕಾಡಿ ನಿವಾಸಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆ ಇದಾಗಿದ್ದು, ಗುರುಪ್ರಸಾದ್ ಮತ್ತು ಅವರ ತಾಯಿ ಇದ್ದ ಸಂದರ್ಭದಲ್ಲಿಯೇ ಮನೆಗೆ ನುಗ್ಗಿದ ಖದೀಮರ ಗ್ಯಾಂಗ್, ಚಿನ್ನಾಭರಣವನ್ನು ದೋಚಿದ್ದಾರೆನ್ನಲಾಗಿದೆ. ಸ್ಥಳಕ್ಕೆ ವಿಧಿ ವಿಜ್ಞಾನ, ಬೆರಳಚ್ಚು ಮತ್ತು ಶ್ವಾನದಳ ಭೇಟಿ

ಜಾಹೀರಾತು
ಜಾಹೀರಾತು
ಜಾಹೀರಾತು

ನಸುಕಿನ ಜಾವ ಮನೆಯ ಮುಂದಿನ ಬಾಗಿಲು ಮುರಿದು ನುಗ್ಗಿದ ಸುಮಾರು 8 ಜನರಿದ್ದ ದರೋಡೆಕೋರರ ತಂಡ. 40 ಸಾವಿರ ನಗದು ಮತ್ತು ಸುಮಾರು 120 ಗ್ರಾಂ ಚಿನ್ನವನ್ನು ದರೋಡೆ ಮಾಡಿದ್ದಾರೆ. ಇವರು ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು ಎಂದು ಗುರುಪ್ರಸಾದ್ ರೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ, ಬೆರಳಚ್ಚು ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ವಿಷಯ ತಿಳಿದ ತಕ್ಷಣ  ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹಾಗೂ ಪುತ್ತೂರು ಡಿವೈಎಸ್ಪಿ ಗಾನ.ಪಿ.ಕುಮಾರ್ ಭೇಟಿ ನೀಡಿದ್ದಾರೆ.