Thursday, January 23, 2025
ಸುದ್ದಿ

ಬೆಂಗಳೂರಿನಲ್ಲಿ ನಡೆಯಲಿದೆ ಕಂಬಳ; ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಸಭೆ – ಕಹಳೆ ನ್ಯೂಸ್

ಪುತ್ತೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಸಂಬoಧ ಪಟ್ಟ ಸಭೆಯು ಬೆಂಗಳೂರಿನ ಸ್ವಾತಿ ಹೊಟೇಲ್ ಸಭಾಂಗಣದಲ್ಲಿ ಶಾಸಕರಾದ ಅಶೋಕ್ ರೈ ಅಧ್ಯಕ್ಷತೆಯಲ್ಲಿ ನಡೆದಿದೆ.


ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ತುಳುನಾಡಿನ ಅಪ್ಪಟ ಸಂಸ್ಕೃತಿಯ ಜನಪದ ಕಲೆಯಾಗಿರುವ ಕಂಬಳವು ಈ ಬಾರಿ ಅದ್ದೂರಿಯಾಗಿ ಅನೇಕ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಾಗೂ ತುಳುನಾಡಿನ ವಿವಿದ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಸಭೆಯಲ್ಲಿ ಶಾಸಕರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು.. ಬೆಂಗಳೂರಿನಲ್ಲಿ ಕಂಬಳ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರಿನ ಮಹಾಜನತೆ ಸೇರಿದಂತೆ ತುಳುನಾಡಿನ ಮಂದಿ ಈ ಕಂಬಳಕ್ಕೆ ಸಾಕ್ಷಿಯಾಗಲಿದ್ದಾರೆ. ಸಭೆಯಲ್ಲಿ 40 ಕ್ಕೂ ಮಿಕ್ಕಿ ಬೆಂಗಳೂರಿನಲ್ಲಿರುವ ತುಳು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಕಂಬಳಕ್ಕೆ ಅಭೂತಪೂರ್ವ ಬೆಂಬಲವೂ ವ್ಯಕ್ತವಾಗಿದ್ದು ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇರುವ ಕಾರಣ ಮಾಡಿಕೊಳ್ಳಬೇಕಾದ ವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷರಾದ ಡಾ. ಕೆ ಸಿ ಬಲ್ಲಾಲ್, ದ ಕ ವಿಶ್ವಬ್ರಾಹ್ಮಣರ ಸಂಘದ ಅಧ್ಯಕ್ಷರಾದ ತುಕರಾಂ ಆಚಾರ್ಯ, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷರಾದ ಡಾ. ಜಗದೀಶ್, ಬೆಂಗಳೂರು ಬಿಲ್ಲವ ಸಂಘ ಯೂತ್ ವಿಂಗ್ ಅಧ್ಯಕ್ಷರಾದ ಶಿವುಸಾಲ್ಯಾನ್, ಜಿಎಸ್‌ಬಿ ಸಂಘದ ಅಧ್ಯಕ್ಷರಾದ ದಿನಕರ ಕಾಮತ್, ಕುಲಾಲ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಚಂಡ್ಲ, ಸ್ಥಳೀಯ ಕಾರ್ಪೋರೇಟರ್‌ಗಳಾದ ರಾಜೇಂದ್ರ ಕುಮಾರ್, ಸಂಪತ್, ಉಮೇಶ್ ಶೆಟ್ಟಿ, ಮಾಜಿ ಡೆಪ್ಯುಟಿ ಮೇಯರ್ ಹರೀಶ್ ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.