Thursday, January 23, 2025
ಸುದ್ದಿ

ಪ್ರೀತಿಯ ಮಡದಿಗಾಗಿ ಚಂದ್ರಗ್ರಹದಲ್ಲಿ ಭೂಮಿ ಖರೀದಿಸಿದ ಪತಿ..! – ಸ್ಪೇಷಲ್ ಬರ್ತ್ಡೇ ಗಿಪ್ಟ್ –ಕಹಳೆ ನ್ಯೂಸ್

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಚಂದ್ರಯಾನ-3 ಯಶಸ್ವಿಯಾಗಿ ಚಂದಿರನ ಅಂಗಳ ಸೇರಿದೆ. ಇದನ್ನೇ ಸ್ಪೂರ್ತಿಯಾಗಿ ಪಡೆದ ಬಂಗಾಳ ಮೂಲದ ಸಂಜಯ್ ಮಹತೋ ತನ್ನ ಪ್ರೀತಿಯ ಪತ್ನಿ ಹುಟ್ಟುಹಬ್ಬಕ್ಕೆ ಚಂದಿರನ ಬಳಿ ಒಂದು ಎಕರೆ ಭೂಮಿ ಖರೀದಿ ಮಾಡಿ ಉಡುಗೊರೆಯಾಗಿ ನೀಡಿದ್ದಾನೆ.

ಈ ಜಾಗ ಖರೀದಿಗೂ ಒಂದು ಕಾರಣವಿದ್ದು ಈತ ವಿವಾಹಕ್ಕೂ ಮುನ್ನ ಪತ್ನಿಗೆ ಚಂದಿರನನ್ನ ಕರೆತರುವುದಾಗಿ ಭರವಸೆ ನೀಡಿದ್ದನಂತೆ. ಹೀಗಾಗಿ ಚಂದ್ರಯಾನ-3 ಬಳಿಕ ಸಂಜಯ್‌ಗೆ ಈ ರೀತಿ ಆಲೋಚನೆ ಬಂದಿದ್ದು, ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ 10,000 ರೂಪಾಯಿ ಹಣ ನೀಡಿ ಚಂದಿರನಲ್ಲಿ ಪ್ರದೇಶ ಖರೀದಿ ಮಾಡಿದ್ದಾರೆ. ಸದ್ಯ ಈ ವಿಚಾರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು