ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಮತ್ತೊಂದು ಕೇಸ್ : ಪದೇ ಪದೇ ಧರ್ಮಸ್ಧಳದ ಬಗ್ಗೆ ಅಪಪ್ರಚಾರ : ಕಾನೂನು ಕ್ರಮ ಕೈಗೊಳ್ಳುವಂತೆ ವಿಜಯ ಅರಳಿ ದೂರು ದಾಖಲು –ಕಹಳೆ ನ್ಯೂಸ್
ಸೌಜನ್ಯ ಪ್ರಕರಣದಲ್ಲಿ ಹೋರಾಟ ಮಾಡುತ್ತಾ ಧರ್ಮಸ್ಧಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದೂರು ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಜಯ ಅರಳಿಯವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದಾರೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಳು ನಡೆದು, ನ್ಯಾಯಾಲಯ ತೀರ್ಪು ನೀಡಿದೆ. ಇದರ ನಂತರ ಇದನ್ನೇ ಬಂಡವಾಳವಾಗಿಸಿಕೊಂಡು ಮಹೇಶ್ ಶೆಟ್ಟಿ ತಿಮರೋಡಿ ಸಮಾಜಿಕ ಮಾಧ್ಯಮಗಳು ಹಾಗೂ ಸಾರ್ವಜನಿಕ ವೇದಿಕೆಯಲ್ಲಿ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲು ಯತ್ನಿಸಿರುವುದು ಬಟ ಬಯಲಾಗಿದೆ. ಆದ್ದರಿಂದ ತಕ್ಷಣ ನ್ಯಾಯಾಂಗ ನಿಂದನೆ ಮಾಡಿದ ಮತ್ತು ಜನರ ದಾರಿ ತಪ್ಪಿಸಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇದ್ದ ನನ್ನ ಧಾರ್ಮಿಕ ಭಾವನೆಗಳ ಮೇಲೆ ಘಾಸಿ ಮಾಡಿ, ನೋವುಂಟು ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ, ಪ್ರಸನ್ನ ರವಿ ಹಾಗೂ ಇತರ ಒಂದಿಷ್ಟು ಮಂದಿ ವಿರುದ್ಧ ದೂರು ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.
ರಾಜ್ಯಾದ್ಯಂತ ಹೈ ಪೆÇ್ರಫೈಲ್ ಪ್ರಕರಣ ಎನ್ನಿಸಲ್ಪಟ್ಟ ಸೌಜನ್ಯ ಪ್ರಕರಣದ ಕುರಿತು ಮಹೇಶ್ ಶೆಟ್ಟಿ ತಿಮರೋಡಿ ಸುಖಾ ಸುಮ್ಮನೆ ಧರ್ಮಸ್ಥಳದ ಹೆಸರು ಪ್ರಜ್ಞಾ ಪೂರ್ವಕ ದುರುದ್ದೇಶದಿಂದ ಎತ್ತಿರುವುದು ಮತ್ತು ಅತ್ಯಾಚಾರ ಕೊಲೆಯಂತಹ ಗುರುತರವಾದ ಸುಳ್ಳು ಅರೋಪ ಮಾಡಿರುವುದು ನಿನ್ನೆ ( 07.09.2023 ) ಸಾಕ್ಷ್ಯಾಧಾರ ಸಹಿತ ಕರಾವಳಿ ಮೂಲದ ವಾರ್ತಾ ವಾಹಿನಿ ಕಹಳೆ ನ್ಯೂಸ್ ಹಾಗೂ ರಾಜ್ಯದ ವಾರ್ತಾ ವಾಹಿನಿ ಪವರ್ ಟಿವಿ ದಾಖಲಾತಿಗಳನ್ನು ಬಿತ್ತರಿಸಿದ ಮಹೇಶ್ ಶೆಟ್ಟಿ ತಿಮರೋಡಿ ಇಷ್ಟು ದಿನ ಹೇಳಿದ ಸುಳ್ಳು ತಿಳಿದಿದೆ. ಮತ್ತು ಅವರೇ ಸ್ವತಃ ನನಗೆ ತಿಳಿದಿತ್ತು ಎಂದು ಒಪ್ಪಿಕೊಂಡಿರುವುದು, ಪ್ರಜ್ಞಾಪೂರ್ವಕವಾಗಿ ಕೆಟ್ಟ ಉದ್ದೇಶ ಒಂದನ್ನು ಮನಸ್ಸಿನಲ್ಲಿಟ್ಟು ಮತ್ತು ಅದಕ್ಕೆ ಪೂರಕ ಎಂಬಂತೆ ಮಂಗಳೂರಿನ ನಮ್ಮ ಟಿವಿ ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಧರ್ಮಸ್ಥಳಕ್ಕೆ ಜೆಸಿಬಿ ಹತ್ತಿಸಿ ಪುಡಿ ಮಾಡಬೇಕು ಎಂದು ಹೇಳಿಕೆ ನೀಡಿರುವುದು ಇದರ ಹಿಂದಿನ ಉದ್ದೇಶವನ್ನು ಸ್ಪಷ್ಟ ಪಡಿಸುವಂತಿದೆ. ಈ ಎಲ್ಲಾ ಘಟನಾವಳಿಗಳಿಂದ ನಾನು ತೀವ್ರವಾಗಿ ನೊಂದಿದ್ದು, ನನ್ನ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ. ಆದ್ದರಿಂದ ತಕ್ಷಣ ಮಹೇಶ್ ಶೆಟ್ಟಿ ತಿಮರೋಡಿ, ಪ್ರಸನ್ನ ರವಿ ಹಾಗೂ ಇತರರ ವಿರುದ್ಧ ತಾವುಗಳ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿಸಿ ದೂರನ್ನ ನೀಡಿದ್ದಾರೆ.