Recent Posts

Monday, January 20, 2025
ಸುದ್ದಿ

ಒಂದೇ ಕುಟುಂಬದ ಇಬ್ಬರ ಸಾವು – ಕಹಳೆ ನ್ಯೂಸ್

ತೊಕ್ಕೊಟ್ಟು: ಉಳ್ಳಾಲ ಹಳೆಕೋಟೆಯ ಕುಟುಂಬವೊಂದರ ಅಪ್ಪ ಹಾಗೂ ಮಗಳು ಒಂದೇ ದಿನ ಮೃತಪಟ್ಟ ಘಟನೆ ನಡೆದಿದೆ. ಮಗಳು ಜ್ವರ ಉಲ್ಬಣಗೊಂಡು ಸಾವನ್ನಪ್ಪಿದ್ದು ತಂದೆ ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. 
ಹಳೆಕೋಟೆಯ ಮಹಮ್ಮದ್‌(80) ಹಾಗೂ ಅವರ ಪುತ್ರಿ ಜಮೀಲಾ(38) ಮೃತಪಟ್ಟವರು. ಜಮೀಲಾ ಜ್ವರದಿಂದ ಬಳಲುತ್ತಿದ್ದುದರಿಂದ ನಾಲ್ಕು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ 3.45ಕ್ಕೆ ಮೃತಪಟ್ಟಿದ್ದಾರೆ.

ಜಮೀಲಾ ಅವರ ಸಾವಿನ ಕುರಿತಾಗಿ ಮನೆಮಂದಿ ಮಹಮ್ಮದ್‌ ಅವರಿಗೆ ತಿಳಿಸಿರಲಿಲ್ಲ. ಹಾಗಿದ್ದರೂ ಸೋಮವಾರ ಮುಂಜಾನೆ 8.30ರ ಸುಮಾರಿಗೆ ಮಹಮ್ಮದ್‌ ಕೂಡಾ ಸಾವನ್ನಪ್ಪಿದ್ದಾರೆ. ಮಹಮ್ಮದ್‌ ಕೆಲವು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು