Saturday, January 25, 2025
ಸುದ್ದಿ

ಪುತ್ತೂರಿನ ಖ್ಯಾತ ಹೋಲ್ ಸೇಲ್ ಡಿಸ್ಟ್ರಿಬ್ಯೂಟರ್ ಸಚಿನ್ ಟ್ರೇಡರ್ಸ್ ನಿಂದ ಲಕ್ಷಾಂತರ ರೂಪಾಯಿ ಕಳವು – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಹೋಲ್ ಸೇಲ್ ಡಿಸ್ಟ್ರಿಬ್ಯೂಟರ್ ಸಚಿನ್ ಟ್ರೇಡರ್ಸ್ ಅಂಗಡಿಯಿoದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಬಗ್ಗೆ ಪುತ್ತೂರು ಪೊಲೀಸರಿಗೆ ಅಂಗಡಿಯ ಮಾಲಕರು ದೂರು ನೀಡಿದ್ದಾರೆ.


ಕಳವು ಪ್ರಕರಣ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದ್ದು ಸಚಿನ್ ಟ್ರೇಡರ್ಸ್ನ ಮಾಲಕಿ ವಿದ್ಯಾ ನಾಯಕ್ ಮತ್ತು ಅವರ ಗಂಡ ಮಂಜುನಾಥ್ ನಾಯಕ್ ಅವರು ಅಂಗಡಿಯ ವ್ಯವಹಾರ ನೋಡಿಕೊಳ್ಳುತ್ತಿದ್ದು, ಸೆ.4ರಂದು ಮಂಜುನಾಥ್ ನಾಯಕ್ ಅವರು ಲೆಕ್ಕ ಮಾಡಿಟ್ಟ ರೂ. 2,15,000 ನಗದನ್ನು ಪೇಪರ್‌ನಲ್ಲಿ ಕಟ್ಟಿ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗಲೆಂದು ಡ್ರಾಯರ್ ಪಕ್ಕದಲ್ಲಿ ಇಟ್ಟಿದ್ದರು. ಆದರೆ ಅವರು ಮರೆತು ನಗದನ್ನು ಅಲ್ಲೇ ಬಿಟ್ಟಿದ್ದರು. ಎರಡು ದಿನ ಬಳಿಕ ಅವರಿಗೆ ತಾನಿಟ್ಟ ಹಣದ ನೆನಪಾಗಿ ಡ್ರಾಯರ್ ಪಕ್ಕ ನೋಡಿದಾಗ ನಗದು ಅಲ್ಲಿ ನಾಪತ್ತೆಯಾಗಿತ್ತು. ಈ ಕುರಿತು ಅವರು ಅಂಗಡಿಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಸೆ.4 ರಾತ್ರಿ ಸಮಯ ಒಬ್ಬ ವ್ಯಕ್ತಿ ಅಂಗಡಿಯ ಹಿಂಬದಿಯ ಕ್ಯಾಂಟೀನ್ ಗೋಡೆಗೆ ಹತ್ತಿ ವೆಂಟಿಲೇಟರ್ ಮೂಲಕ ಒಳಪ್ರವೇಶಿಸಿ ಅಂಗಡಿಯ ಒಳಗೆ ಬಂದು ಅಂಗಡಿಯ ಡ್ರಾಯರ್ ಪಕ್ಕದಲ್ಲಿದ್ದ ಹಣದ ಕಟ್ಟನ್ನು ಕದ್ದು ಹೋಗುತ್ತಿರುವುದು ಕಂಡು ಬಂದಿದೆ. ಸೆ.7ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಸಿ ಕ್ಯಾಮರ ಪರಿಶೀಲಿಸಿದಾಗ ಅಂಗಡಿಯ ಕೆಲಸದಾಳು ಕುದ್ಮಾರು ಗ್ರಾಮದ ಚೇತನ್ ಕುಮಾರ್ ಹೆಚ್ ಎಂದು ಮೇಲ್ನೊಟಕ್ಕೆ ಕಂಡು ಬರುತ್ತಿತ್ತು. ಆತನೇ ಕಳವು ಮಾಡಿರಬಹದು ಎಂದು ಅಂಗಡಿಯ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು