Recent Posts

Tuesday, November 26, 2024
ಸುದ್ದಿ

ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿ.ವಿ ಪ್ರಾದೇಶಿಕ ಕೇಂದ್ರದ ಕಾಮಗಾರಿ ಆರಂಭಿಸಲು ಆದೇಶ – ಕಹಳೆ ನ್ಯೂಸ್

ಮಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿ.ವಿ ಪ್ರಾದೇಶಿಕ ಕೇಂದ್ರದ ನಿರ್ಮಾಣಕ್ಕೆ ಕಾಮಗಾರಿ ಟೆಂಡರ್ ಶೀಘ್ರವೇ ಕರೆದು ಆರಂಭಿಸಲು ಆದೇಶಿಸಿರುವುದಾಗಿ ರಾಜ್ಯ ವೈದ್ಯಕೀಯ, ಕೌಶಲ್ಯಾಭಿವೃದ್ಧಿ ,ಉದ್ಯಮಶೀಲತಾ ಇಲಾಖೆಯ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ನುಡಿದರು.

ಸರಕಾರಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಮಾಡಿದ ಮನವಿ ಮೇರೆಗೆ ಮೇರಿಹಿಲ್ ನಲ್ಲಿ ವಿ.ವಿ ಪ್ರಾದೇಶಿಕ ಕೇಂದ್ರದ ಸ್ಥಾಪನೆಗೆ ಕಾದಿರಿಸಲಾದ ಸ್ಥಳಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶಾಸಕರು ಸಚಿವರಿಗೆ ಮಾಹಿತಿ ನೀಡಿ, ಎರಡು ವರ್ಷದ ಹಿಂದಿನ ಸರಕಾರದ ಅವಧಿಯಲ್ಲಿ ಈ ಜಾಗವನ್ನು ಕಾದಿರಿಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಾಮಗಾರಿ ಆರಂಭಿಸುವುದμÉ್ಟೀ ಈಗಿನ ಕೆಲಸವಾಗಿದೆ. 40 ಕೋಟಿ ರೂ. ಯೋಜನೆ ಇದಾಗಿದೆ. ಪ್ರಾದೇಶಿಕ ಕೇಂದ್ರದ ಜತೆ, ಕೌಶಲ್ಯಾಭಿವೃದ್ಧಿ ಕೇಂದ್ರ,ಸ್ಪೋಟ್ರ್ಸ್ ಸೆಂಟರ್ ಸಹಿತ ಹಲವು ಸೌಲಭ್ಯವಿದೆ.
ಮಂಗಳೂರು ಪ್ರಾದೇಶಿಕ ಕೇಂದ್ರದಿಂದ ದ.ಕ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಪ್ರದೇಶದ ವಿದ್ಯಾರ್ಥಿಗಳಿಗೆ ಬಹು ಪ್ರಯೋಜನಕಾರಿಯಾಗಲಿದೆ ಎಂದರು.

ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಿ ಜತೆಗಿದ್ದ ಆರ್.ಜಿ.ಯು.ಎಚ್.ಎಸ್. ನ ವೈಸ್ ಚಾನ್ಸಲರ್ ಡಾ.ರಮೇಶ್ ಎಂ.ಕೆ ಅವರಿಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಸೆನೆಟ್ ಸದಸ್ಯರಾದ ಡಾ.ಶಿವಶರಣ್ ಶೆಟ್ಟಿ ,ಡಾ.ಶರಣ್ ಶೆಟ್ಟಿ ಅವರು ನಿಗದಿತ ಕಾಲಮಿತಿಯೊಳಗೆ ಪ್ರಾದೇಶಿಕ ಕೇಂದ್ರದ ನಿರ್ಮಾಣ ಕಾಮಗಾರಿ ಮುಗಿಸುವಂತೆ ಮನವಿ ಮಾಡಿದರು. ಸಿಂಡಿಕೇಟ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.