ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಮತ್ತೆ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಇಂದು ಟ್ರಾಫಿಕ್ ದಂಡ ರಿಯಾಯಿತಿ ಪಾವತಿಗೆ ಕೊನೆ ದಿನ. ಜುಲೈ 6 ರಿಂದ ಸೆ.9ರವರೆಗೆ ಟ್ರಾಫಿಕ್ ದಂಡ ಪಾವತಿಗೆ 2ನೇ ಬಾರಿ ಅವಕಾಶ ನೀಡಲಾಗಿತ್ತು. ಸದ್ಯ ಗಡವು ಮುಗಿದಿದ್ದು ಇಂದು ದಂಡ ಪಾವತಿಗೆ ಕೊನೆ ದಿನವಾಗಿದೆ.
ರಿಯಾಯಿತಿ ದರದಲ್ಲಿ ದಂಡ ಕಟ್ಟೋದು ಹೇಗೆ..?
1) ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು.
2) ಪೇಟಿಎಂ ಅಪ್ಲಿಕೇಶನ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
3) ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ವಾಹನದ ನೋಂದಣಿ ಸಂಖ್ಯೆ ನಮೂದಿಸುವ ಮೂಲಕ ಬಾಕಿ ಪಾವತಿ ಮಾಡಬಹುದು.
4) ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ದಂಡ ಪಾವತಿಸಬಹುದಾಗಿದೆ.
5 ) ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದು. ದಂಡವನ್ನು ಮೊತ್ತವನ್ನು ಪಾವತಿಸಿ ರಶೀದಿ ಪಡೆಯಬಹುದು..