Recent Posts

Monday, January 20, 2025
ಸುದ್ದಿ

ಇಂಡಸ್ಟ್ರಿಯಲ್ಲಿ ಕೆಲಸ ಸಂದರ್ಭದಲ್ಲಿ ಅವಘಡ: ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು – ಕಹಳೆ ನ್ಯೂಸ್

ಸುಳ್ಯ: ವಿದ್ಯುತ್ ಶಾಕ್ ತಗುಲಿ ಯುವಕ ಮೃತಪಟ್ಟ ಘಟನೆ ಸುಳ್ಯ ಗಾಂಧೀನಗರದಲ್ಲಿ ನಡೆದಿದೆ. ಗಾಂಧೀನಗರ ಸಮೀಪ ಆಲೆಟ್ಟಿ ಕ್ರಾಸ್‍ನ ಗುರುಂಪುವಿನ ಇಂಡಸ್ಟ್ರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದುಗ್ಗಲಡ್ಕ ಸಮೀಪದ ಕಂದಡ್ಕದ ನಾಗರಾಜ್(18) ಮೃತಪಟ್ಟ ಯುವಕ.

ಸೋಮವಾರ ಬೆಳಗ್ಗೆ ಬಂದು ಇಂಡಸ್ಟ್ರಿಯಲ್ಲಿ ಕೆಲಸ ಆರಂಭಿಸಿದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಯುವಕ ಓರ್ವನೇ ಕೆಲಸ ನಿರ್ವಹಿಸುತ್ತಿದ್ದ. ಯುವಕ ಬಿದ್ದಿರುವುದು ಗಮನಿಸಿ ಸ್ಥಳೀಯರು ಇಂಡಸ್ಟ್ರೀಸ್‍ನ ಮಾಲಕನಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಎಂಟು ತಿಂಗಳ ಹಿಂದೆಯಷ್ಟೇ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಸೇರಿದ್ದ ನಾಗರಾಜ್ ಮನೆಗೆ ಆಧಾರ ಸ್ತಂಭವಾಗಿದ್ದ. ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು