ಪುತ್ತೂರಿನಲ್ಲಿ ಇಂದು ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಅಂಗವಾಗಿ 13ನೇ ವರ್ಷದ “ಮೊಸರು ಕುಡಿಕೆ ಮತ್ತು ಶೋಭಾಯಾತ್ರೆ” – ಕಹಳೆ ನ್ಯೂಸ್
ಪುತ್ತೂರು : ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಇಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 13ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ನಡೆಯಲಿದೆ.
ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯನ್ನು ಡಾ. ಎಂ.ಕೆ.ಪ್ರಸಾದ್ ಉದ್ಘಾಟನೆಯಲ್ಲಿದ್ದು. ಬಜರಂಗದಳ ಮಂಗಳೂರು ವಿಭಾಗದ ಸಹ ಸಂಯೋಜಕ ಪುನಿತ್ ಅತ್ತಾವರ ಅವರು ಧ್ವಜ ಹಸ್ತಾಂತರ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ದೊರಕಲಿದೆ. ಶೋಭಾಯಾತ್ರೆಯು ಬೊಳುವಾರು ಓಂ ಶ್ರೀ ಶಕ್ತಿ ಅಂಜನೇಯ ಮಂತ್ರಾಲಯದ ಬಳಿಯಿಂದ ಆರಂಭoಗೊoಡು ಮುಖ್ಯರಸ್ತೆಯಾಗಿ ಅಂಚೆಕಚೇರಿ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಿ ಸಭಾ ಕಾರ್ಯಕ್ರಮ ಮುಗಿದ ಬಳಿಕ ಅದೇ ರಸ್ತೆಯಾಗಿ ಸಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಾದು ಕಲ್ಲಾರೆಯ ತನಕ ಸಾಗಿ ಅಲ್ಲಿಂದ ಹಿಂದಿರುಗಿ ಅರುಣಾ ಚಿತ್ರಮಂದಿರ ಬಳಿಯಿಂದ ಎಪಿಎಂಸಿ ರಸ್ತೆಯ ಮೂಲಕ ಆದರ್ಶ ಆಸ್ಪತ್ರೆಯ ಬಳಿಯಿಂದ ತೆರಳಿ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಸಮಾಪನೆಗೊಳ್ಳಲಿದೆ.
ಸಂಜೆ ಬೊಳುವಾರಿನಿಂದ ಹೊರಟ ಶೋಭಾಯಾತ್ರೆಯು ದೇವಳದ ಗದ್ದೆಗೆ ಬಂದ ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ವಿಶ್ವಹಿಂದೂ ಪರಿಷದ್‌ನ ಕರ್ನಾಟಕ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ವಿಶ್ವಹಿಂದು ಪರಿಷದ್ ಪುತ್ತೂರು ಜಿಲ್ಲೆ ಕಾರ್ಯದರ್ಶಿ ನವೀನ್ ನೆರಿಯ, ನ್ಯಾಯವಾದಿ ಅರುಣ್‌ಶ್ಯಾಮ್, ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೆಸ್ಕಾಂ ಮಾಜಿ ನಿರ್ದೇಶಕರಾಗಿರುವ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಟಿ ತಿಳಿಸಿದ್ದಾರೆ.