Recent Posts

Sunday, January 19, 2025
ಸುದ್ದಿ

ಕಾಡುಹಂದಿ ಬೇಟೆಯಾಡಿ ಮಾಂಸ ಮಾರಾಟ: ಆರೋಪಿಗಳ ಬಂಧನ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

ಕಡೂರು ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿನ ಕೆರೆ ಏರಿ ಮೇಲೆ ಮೂರು ಕಾಡು ಹಂದಿಯ ಮಾಂಸವನ್ನು ಏಳುಮಂದಿ ಮಾರಾಟ ಮಾಡುತ್ತಿದ್ದರು. ಈ ವೇಳೆಯಲ್ಲಿ ಚಿಕ್ಕಮಗಳೂರು ಮತ್ತು ಕಡೂರು ಅರಣ್ಯಾಧಿಕಾರಿಗಳು ಜಂಟಿಯಾಗಿ ದಾಳಿಯನ್ನು ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರವಿ, ಪ್ರತಾಪ, ಜಯಣ್ಣ, ಮಾರಪ್ಪ, ಮಂಜುನಾಥ್, ಮಂಜಪ್ಪ, ನಂಜಪ್ಪ ಎಂಬುವವರು ದೊಡ್ಡಸಾಗರ ಮತ್ತು ಶಿವಪುರ ಗ್ರಾಮದ ವ್ಯಕ್ತಿಗಳಾಗಿದ್ದು, ಈ ಏಳು ಮಂದಿ ಬಂಧಿತ ಆರೋಪಿಗಳು. ಇವರಿಂದ 50 ಕೆ.ಜಿ. ಹಂದಿ ಮಾಂಸ ಹಾಗೂ ಬೊಲೆರೋ ಪಿಕ್ ಹಪ್ ವಾಹನ, ಎರಡು ಬೈಕ್‍ಗಳನ್ನು ವಶಪಡಿಸಲಾಗಿದೆ. ಹಾಗೂ ಕಡೂರು ವಲಯದಲ್ಲಿ ಪ್ರಕರಣ ದಾಖಲಾಗಿದೆ.