Thursday, January 23, 2025
ಸುದ್ದಿ

ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದ (ರಿ.) ಇದರ ವತಿಯಿಂದ  ಬೃಹತ್ “ರಕ್ತದಾನ ಶಿಬಿರ” ಕಾರ್ಯಕ್ರಮ – ಕಹಳೆ ನ್ಯೂಸ್

ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ಉಡುಪಿ ಮತ್ತು ಕರಾವಳಿ ಯುವಕ-ಯುವತಿ ವೃಂದ (ರಿ.) ಹೆಜಮಾಡಿ ಇವರ ಆಶ್ರಯದಲ್ಲಿ ರಕ್ತ ನಿಧಿ ಕೇಂದ್ರ ಕೆ.ಎಂ.ಸಿ. ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ಇಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ” ಕಾರ್ಯಕ್ರಮ ನಡೆಯಿತುಈ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾಡಿದರು.


ನಂತರ ಮಾತನಾಡಿದ ಅವರು ದಾನಗಳಲ್ಲಿ ಶ್ರೇಷ್ಠದಾನವೆಂದರೆ ಅದು ರಕ್ತದಾನ. ರಕ್ತಕ್ಕೆ ಕುಲ, ಗೋತ್ರ, ಜಾತಿ, ಮತಗಳೆಂಬ ಭೇದ ಭಾವವಿಲ್ಲ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡ ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದದವರಿಗೆ ಅಭಿನಂದನೆ ಸಲ್ಲಿಸಿ ಈ ಕಾರ್ಯ ಇತರ ಸಂಘ- ಸಂಸ್ಥೆಗಳಿಗೂ ಆದರ್ಶ ವಾಗಲಿ ಸಾವಿರಾರು ಪ್ರಾಣ ಉಳಿಯಲಿ ಎಂದು ಶಾಸಕರು ಆಶಯ ವ್ಯಕ್ತ ಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹೆಜಮಾಡಿ ಕರಾವಳಿ ಯುವಕ ವೃಂದದ ಅಧ್ಯಕ್ಷರಾದ ಅಶೋಕ್ ವಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಎ ಮೆಂಡನ್, ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶರಣ್ ಮಟ್ಟು, ಹೆಜಮಾಡಿ ಕರಾವಳಿ ಯುವತಿ ವೃಂದ ಅಧ್ಯಕ್ಷರಾದ ಪವಿತ್ರಾ ಗಿರೀಶ್, ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಮಿಹಿರ್, ಹಿತಾಶ್ರೀಹೆಜಮಾಡಿ ಕರಾವಳಿ ಯುವತಿ ವೃಂದ ಅಧ್ಯಕ್ಷರಾದ ಪವಿತ್ರಾ ಗಿರೀಶ್, ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಮಿಹಿರ್, ಹಿತಾಶ್ರೀ ಚಂದ್ರಕಾoತ್ ಶ್ರೀಯಾನ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಉದ್ಯಮಿಗಳಾದ ಹೇಮಾನಂದ ಕೆ, ಉಚ್ಚಿಲ ಕರಾವಳಿ ಫ್ರೆಂಡ್ಸ್ ಅಧ್ಯಕ್ಷರಾದಹರಿಪ್ರಸಾದ್ ಸಾಲ್ಯಾನ್, ದುರ್ಗಾ ಫ್ರೆಂಡ್ಸ್ ಹೆಜಮಾಡಿ ಅಧ್ಯಕ್ಷರಾದ ರವಿ ಹಾಗೂ ಕರಾವಳಿ ಯುವಕ-ಯುವತಿ ವೃಂದ (ರಿ.) ಹೆಜಮಾಡಿ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು