ಬಂಟ್ವಾಳ: ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರು ಜಖಂಗೊAಡ ಘಟನೆ ಕಲ್ಲಡ್ಕ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿಗೆ ಲಾರಿ ಗುದ್ದಿದ್ದು. ಡಿಕ್ಕಿಯ ಹೊಡೆತಕ್ಕೆ ಕಾರಿನ ಎಲ್ಲಾ ಭಾಗಗಳು ಜಖಂಗೊoಡಿದೆಯಲ್ಲದೆ ಎರಡು ಟಯರ್ ಗಳು ಒಡೆದುಹೋಗಿದೆ. ಮಹಾಲಿಂಗ್ ಭಟ್ ಅವರಿಗೆ ಸೇರಿದ ವಾಹನವಾಗಿದ್ದು, ಅದೃಷ್ಟವಶಾತ್ ಕಾರಿನ ಚಾಲಕ ಹಾಗೂ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿರುವ ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಲಾರಿ ಇದಾಗಿದ್ದು ಕಂಪೆನಿಗೆ ಸೇರಿದ ವಾಹನಗಳು ಇದೇ ರೀತಿ ಅನೇಕ ಬಾರಿ ಅಪಘಾತಕ್ಕೆ ಕಾರಣವಾಗಿದೆ.
ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯನ್ನು ಮಾಡುತ್ತಿರುವ ಬಗ್ಗೆ ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ಇತ್ತೀಚಿಗೆ ಸಂಸದರ ಬಳಿ ಸಾರ್ವಜನಿಕರು ದೂರಿದ್ದರು. ಕಂಪೆನಿ ಮಾತ್ರ ಯಾರ ಮಾತಿಗೂ ಬೆಲೆ ಕೊಡದೆ ಮೌನವಾಗಿ ಉಳಿದುಬಿಟ್ಟಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.