Thursday, January 23, 2025
ಸುದ್ದಿ

ಮಂಗಳೂರಿನಲ್ಲಿ ಅಕ್ರಮ ಗೋ ಮಾಂಸ ಸಾಗಾಟ : ವಾಹನದ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು – ಕಹಳೆ ನ್ಯೂಸ್

ಮಂಗಳೂರು: ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನದ ಮೇಲೆ ಬಜರಂಗದಳ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಉರ್ವ ಸ್ಟೋರ್ ಬಳಿ ತಡರಾತ್ರಿ ಜೋಕಟ್ಟೆಯಿಂದ ಮಂಗಳೂರು ನಗರದ ಬೀಫ್ ಸ್ಟಾಲ್ ಗಳಿಗೆ ಸರಬರಾಜು ಮಾಡುತ್ತಿದ್ದ ವೇಳೆ ದಾಳಿ ನಡೆಸಲಾಗಿದ್ದು, ಸುಮಾರು 2.5 ಕ್ವಿಂಟಾಲ್ ಗೂ ಹೆಚ್ಚಿನ ಗೋ ಮಾಂಸ ತುಂಬಿದ್ದ ಆಟೋ ರಿಕ್ಷಾವನ್ನು ತಡೆದ ಬಜರಂಗದಳ ಕಾರ್ಯಕರ್ತರು ಉರ್ವ ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾಂಸ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು