Friday, January 24, 2025
ಸುದ್ದಿ

ಭೀಕರ ರಸ್ತೆ ಅಪಘಾತ : ನಿಂತಿದ್ದ ಲಾರಿಗೆ ಅಪ್ಪಳಿಸಿದ ಕೆಎಸ್ ಆರ್ ಟಿ ಸಿ ಬಸ್ : 5ಜನ ಸಾವು – ಕಹಳೆ ನ್ಯೂಸ್

ಚಿತ್ರದುರ್ಗ : ನಿಂತಿದ್ದ ಲಾರಿಗೆ ಕೆಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಐದು ಜನ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಳಗಿನ ಜಾವ 4 ಗಂಟೆಗೆ ಈ ಅಪಘಾತ ನಡೆದಿದ್ದು ಕೆಎಸ್ ಆರ್ ಟಿ ಸಿ ಬಸ್ಸು ಬೆಂಗಳೂರಿನ ಕಡೆಯಿಂದ ರಾಯಚೂರಿಗೆ ಹೋಗುತ್ತಿತ್ತು, ಯರಬಳ್ಳಿ ಗ್ರಾಮದ ಸಮೀಪದ ರಾಷ್ಟ್ರಿಯಾ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಲಾರಿ ನಿಂತಿತ್ತು ಇನ್ನು ಕೆಎಸ್ ಆರ್ ಟಿ ಸಿ ಬಸ್ ಚಾಲಕ ನಿದ್ದೆಯಲ್ಲಿ ಇದ್ದಂತ ಸಂದರ್ಭದಲ್ಲಿ ನಿಂತಿದ್ದ ಲಾರಿಗೆ ಎಡಬದಿಯಿಂದ ಗುದ್ದಿದ ಹಿನ್ನೆಲೆ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರನ್ನು ಗಂಭೀರವಾಗಿ ಗಾಯಗೊಂಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

108 ರ ಅಂಬುಲೆನ್ಸ್ ಚಾಲಕರದಂತಹ ಜಾಕಿರ್ ಮತ್ತು ಸಿದ್ದೇಶ್ವರ ರವರು ಬಸ್ಸಿನಲ್ಲಿ ಇದ್ದಂತಹ ಗಾಯಾಳ ನೆರವರಿಗೆ ನಿಂತು ಚಳ್ಳಕೆರೆ, ಹಿರಿಯೂರು ಮತ್ತು ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳ ಪೊಲೀಸ್ ಠಾಣೆಯವರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು