Friday, January 24, 2025
ಸುದ್ದಿ

ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ ಆಯ್ಕೆ – ಕಹಳೆ ನ್ಯೂಸ್

ಮೂಡುಬಿದಿರೆ: ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿಯಾಗಿ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.

ಒಂಟಿಕಟ್ಟೆಯ ಸೃಷ್ಠಿ ಗಾರ್ಡನ್ ನ ಸಭಾಭವನದಲ್ಲಿ ನಿರ್ಗಮಿತ ಅಧ್ಯಕ್ಷ ಏರ್ಮಾಳ್ ರೋಹಿತ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಏರ್ಮಾಳ್ ರೋಹಿತ್ ಹೆಗ್ಡೆ (ಗೌರವಾಧ್ಯಕ್ಷರು), ಚಂದ್ರಹಾಸ ಸನಿಲ್ (ಕೋಶಾಧಿಕಾರಿ), ರಶ್ಮಿತ್ ಶೆಟ್ಟಿ, ಶಕ್ತಿಪ್ರಸಾದ್ ಶೆಟ್ಟಿ (ಉಪಾಧ್ಯಕ್ಷರು), ವಿದ್ಯಾಧರ್ ಜೈನ್(ಉಪ ಕಾರ್ಯದರ್ಶಿ) ಹಾಗೂ ತೀರ್ಪುಗಾರರ ಸಂಚಾಲಕರಾಗಿ ವಿಜಯಕುಮಾರ್ ಕಂಗಿನಮನೆ ಆಯ್ಕೆಯಾಗಿದ್ದಾರೆ. ಸೆ.18ರಂದು ಮೂಡುಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಸಭೆ ನಡೆಸಿ, ಈ ಋತುವಿನ ಕಂಬಳದ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಳೆದ ವರ್ಷ 18 ಕಂಬಳಗಳು ನಡೆದಿದ್ದು, ಈ ಬಾರಿ ಹೊಸ ಕಂಬಳ ಸಹಿತ 23 ಕಂಬಳಗಳು ನಡೆಯುವ ನಿರೀಕ್ಷೆ ಇದೆ ಎಂದು ಪ್ರಸ್ತಾಪಿಸಲಾಯಿತು.
ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳ ಕ್ಷೇತ್ರದ ಹಿರಿಯರ ಮಾರ್ಗದರ್ಶನ, ಕಿರಿಯರ ಸಹಕಾರದಿಂದ ಸಮಿತಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತೇನೆ. ಯಾವುದೇ ಸಮಸ್ಯೆ ಬಂದಾಗ ಕಂಬಳ ಕ್ಷೇತ್ರದ ಅನುಭವಿಗಳ ಸಲಹೆ, ಸೂಚನೆಯನ್ನು ಪಡೆದು ಪರಿಹಾರಿಸೋಣ. ಕಂಬಳದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡುವುದು ಬೇಡ. ರಾಜಕೀಯಯೇತರವಾಗಿ ಸಕಾರಾತ್ಮಕವಾಗಿ ಕಂಬಳವನ್ನು ಮುನ್ನಡೆಸೋಣ. ಭಾಸ್ಕರ್ ಕೋಟ್ಯಾನ್ ನೇತೃತ್ವದ ಕಂಬಳ ಶಿಸ್ತು ಸಮಿತಿಗೆ ಮತ್ತಷ್ಟು ಬಲ ನೀಡಿ, ಅಚ್ಚುಕಟ್ಟಾಗಿ ಕಂಬಳ ಹಾಗೂ ಸಮಿತಿಯನ್ನು ಮುನ್ನಡೆಸೋಣ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಶಾಸಕ, ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕಂಬಳವನ್ನು ನಡೆಸುವ ಬಗ್ಗೆ ತಯಾರಿ ನಡೆಯುತ್ತಿದೆ. ಜಿಲ್ಲಾ ಕಂಬಳ ಸಮಿತಿ ಹಾಗೂ ಇತರ ಕಂಬಳ ಸಮಿತಿಗಳ ಸಂಪೂರ್ಣ ಸಹಕಾರದ ನಿರೀಕ್ಷೆಯಲ್ಲಿದ್ದೇವೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಕಂಬಳ ವೀಕ್ಷಣೆ ಮಾಡುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಭಾಗವಹಿಸುವವರಿಗೆ ಅನ್‌ಲೈನ್ ಮುಖಾಂತರ ಪಾಸ್ ಒದಗಿಸುವ ಕೆಲಸವನ್ನೂ ಮಾಡಲಿದ್ದೇವೆ. ಬೆಂಗಳೂರು ಕಂಬಳ-ನಮ್ಮ ಕಂಬಳ ಎನ್ನುವ ಧ್ಯೇಯವಾಕ್ಯದೊಂದಿಗೆ ಕಂಬಳ ಆಯೋಜನೆಗೊಳ್ಳುತ್ತಿದೆ. ಕಂಬಳದ ನೇರಪ್ರಸಾರಕ್ಕಾಗಿ ಅಂತಾರಾಷ್ಟಿçÃಯ ಮಟ್ಟದ ಎರಡು ಸ್ಪೋಟ್ಸ್ ಚಾನೆಲ್‌ಗಳು ನಮ್ಮನ್ನು ಸಂಪರ್ಕಿಸಿದ್ದಾರೆ. ಬೆಂಗಳೂರಿನಲ್ಲಿ ತುಳು ಭವನ ನಿರ್ಮಾಣ ಸಹಿತ ತುಳು ಭಾಷೆಗೆ ಆಧ್ಯತೆ ನೀಡುವ ನಿಟ್ಟಿನಲ್ಲೂ ಕಂಬಳದಲ್ಲಿ ಸರ್ಕಾರದ ಗಮನಸೆಳೆಯಲ್ಲಿದ್ದೇವೆ. ತುಳುನಾಡಿನ ಸಂಸ್ಕೃತಿ, ಪಾರಂಪರಿಕ ತಿನಿಸುಗಳ ಪ್ರದರ್ಶನವೂ ಕಂಬಳೋತ್ಸವದಲ್ಲಿರುತ್ತದೆ.ಕAಬಳ ಕೋಣಗಳನ್ನು ಬೆಂಗಳೂರಿಗೆ ಕರೆತರುವ ಲಾರಿ ಬಾಡಿಗೆಯನ್ನು ನೀಡಲಿದ್ದೇವೆ. ಕಂಬಳ ಕ್ಷೇತ್ರದ 20 ಸಾವಿರಕ್ಕೂ ಅಧಿಕ ಮಂದಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದೇವೆ. ತಮ್ಮ ಹೆಸರಿನಲ್ಲಿ ಕೋಣಗಳನ್ನು ಓಡಿಸುವುದಾದರೆ ಅವುಗಳಿಗೆ ಪೂರಕವಾದ ಪ್ರಾಯೋಜಕತ್ವವನ್ನು ನಾವು ಮಾಡುತ್ತೇವೆ ಎಂದು ಕೆಲವು ಸಚಿವರು ತಿಳಿಸಿದ್ದು, ಕಂಬಳ ಯಜಮಾನರ ಜೊತೆ ಸಮಾಲೋಚನೆ ನಡೆಸುತ್ತೇವೆ ಎಂದರು. ಅವಿಭಜಿತ ದ.ಕ ಜಿಲ್ಲೆಯಲ್ಲಿ ನಡೆಯುವ ಕಂಬಳಗಳಿಗೆ 5 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಭರವಸೆಯಿತ್ತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಬಳ ಕೋಣಗಳ ಜೊತೆ ಕನಿಷ್ಠ ಹಲವು ಮಂದಿ ದುಡಿಯುವ ವರ್ಗ ಬೆಂಗಳೂರಿಗೆ ಬರಬೇಕಾಗುತ್ತದೆ. ಇದಕ್ಕೆ ಅಂದಾಜು 1.25 ಲಕ್ಷ ರೂ.ವೆಚ್ಚವಾಗುತ್ತದೆ. ಈ ಕುರಿತು ಆಯೋಜಕರು ಗಮನಹರಿಸಬೇಕು. ಬೆಂಗಳೂರಿನಲ್ಲಿ ನಡೆಯುವ ಕಂಬಳದ ನಂತರ 15 ದಿನಗಳ ನಂತರವೇ ಮುಂಬರುವ ಕಂಬಳವನ್ನು ನಡೆಸಿ ಎಂದು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ ಸಲಹೆ ನೀಡಿದರು.
ಸಮಿತಿಯ ಮಾಜಿ ಅಧ್ಯಕ್ಷರಾದ ಪಿ.ಆರ್ ಶೆಟ್ಟಿ, ಭಾಸ್ಕರ್ ಎಸ್. ಕೋಟ್ಯಾನ್, ಶಾಂತಾರಾಮ ಶೆಟ್ಟಿ ಬಾರ್ಕೂರ, ಮೂಲ್ಕಿ ಸೀಮೆಯ ದುಗ್ಗಣ ಸಾಮಂತ, ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ನಿರ್ಗಮನ ಕಾರ್ಯದರ್ಶಿ ರಕ್ಷಿತ್ ಜೈನ್, ಪ್ರಮುಖರಾದ ಶ್ರೀಕಾಂತ್ ಭಟ್ ನಂದಳಿಕೆ, ಇರುವೈಲ್ ಸತೀಶ್ಚಂದ್ರ ಸಾಲ್ಯಾನ್, ಬೆಳ್ಳಿಪಾಡಿ ಕೈಪ ಕೇಶವ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.