Saturday, January 25, 2025
ಸುದ್ದಿ

ಬಂಟ್ವಾಳದಲ್ಲಿ ತುಳುಕೂಟ ವತಿಯಿಂದ ಸೆ.16ರಂದು ಹಿರಿಯ ರಂಗಕರ್ಮಿ ಮಂಜು ವಿಟ್ಲ ಅವರಿಗೆ ಸಾರ್ವಜನಿಕ ಸಂತಾಪ ಸೂಚಕ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ಇತ್ತೀಚೆಗೆ ಅಗಲಿದ ರಂಗಕರ್ಮಿ, ತರಬೇತುದಾರ ಮಂಜು ವಿಟ್ಲ ಅವರ ಸಾರ್ವಜನಿಕ ಸಂತಾಪ ಸೂಚಕ ಸಭೆಯನ್ನು ತುಳುಕೂಟ ವತಿಯಿಂದ ಸೆ.16ರಂದು ಸಂಜೆ 4.30ಕ್ಕೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.

ಸಾಮಾಜಿಕ, ಧಾರ್ಮಿಕ, ರಾಜಕೀಯ, ಸೇವಾ ಕ್ಷೇತ್ರಗಳ ಸಹಿತ ಮಂಜು ವಿಟ್ಲ ತೊಡಗಿಸಿಕೊಂಡಿದ್ದ ಎಲ್ಲ ಕ್ಷೇತ್ರಗಳ ಒಡನಾಡಿಗಳು ಈ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ದುಡಿದಿದ್ದ ರಂಗಕರ್ಮಿ ಮಂಜು ವಿಟ್ಲ ಅವರು ಪ್ರತಿಯೊಬ್ಬರಿಗೂ ಬೇಕಾದವರಾಗಿದ್ದು, ಎಲ್ಲರೊಂದಿಗೆ ಹಿರಿಯ, ಕಿರಿಯ ಎಂಬ ಬೇಧಭಾವವಿಲ್ಲದೆ ಬೆರೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ತುಳುಕೂಟ ಬಂಟ್ವಾಳ ಸಮಾನ ಮನಸ್ಕರ ಜತೆ ಸಮಸ್ತ ಸಮಾಜದ ಬಂಧುಗಳಿ0ದ ಸಾರ್ವಜನಿಕ ಸಂತಾಪ ಸೂಚಕ ಸಭೆಯನ್ನು ಆಯೋಜಿಸಿದೆ ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು