Friday, January 24, 2025
ಸುದ್ದಿ

ಪುತ್ತೂರು ನಗರ ಠಾಣೆ ಆಗಿ ಆ0ಜನೇಯ ರೆಡ್ಡಿ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ ನಾಲ್ಕು ಪಿ.ಎಸ್.ಐ. ಹುದ್ದೆಗಳಲ್ಲಿ ಮೂರು ಹುದ್ದೆ ಖಾಲಿಯಾಗಿದೆ ಎಂದು ವಿದ್ಯಮಾನ ವರದಿ ಮಾಡಿತ್ತು. ಇದರ ಬಗ್ಗೆ ಶಾಸಕರಲ್ಲಿ ಕೇಳಿದಾಗ, ಒಂದು ವಾರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ವಿದ್ಯಮಾನದ ವರದಿ ಬಳಿಕ ತಕ್ಷಣವೇ ಸ್ಪಂದಿಸಿದ ಶಾಸಕರು , ಪಿ.ಎಸ್.ಐ. ಆಂಜನೇಯ ರೆಡ್ಡಿ ಅವರನ್ನು ನೇಮಕ ಮಾಡುವಲ್ಲಿ ಯಶಸ್ವಿಯಾಗಿದ್ದು, ಅವರು ಅಧಿಕಾರಿ ಸ್ವೀಕಾರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಂಜನೇಯ ರೆಡ್ಡಿ ಅವರು ಈ ಮೊದಲು ಕಡಬ, ಬೆಳ್ಳಾರೆ ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ್ದು, ತಮ್ಮ ದಕ್ಷ ಮತ್ತು ಪ್ರಾಮಾಣಿಕ ಸೇವೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು