Friday, January 24, 2025
ಸುದ್ದಿ

ವಿಟ್ಲ: ಪುಣಚದ ದೇವರಗುಂಡಿ ಮಣಿಲ ಕೂರೇಲು ಸ್ಮಶಾನದ ರಸ್ತೆ ಬಳಿ ಗುಡ್ಡ ಕುಸಿತ :  ಸಾರ್ವಜನಿಕರ ಪರದಾಟ – ಕಹಳೆ ನ್ಯೂಸ್

ವಿಟ್ಲ: ಗುಡ್ಡ ಕುಸಿದು ಬಿದ್ದು ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಪರದಾಡುತ್ತಿರುಬ ಘಟನೆ ಪುಣಚದ ದೇವರಗುಂಡಿ ಮಣಿಲ ಕೂರೇಲು ಸ್ಮಶಾನದ ಬಳಿಯಲ್ಲಿ ನಡೆದಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಬದಿ ಕುಸಿಯುತ್ತಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಾಕಷ್ಟು ಬಾರಿ ದೂರು ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲೆಗೆ ತೆರಳುವ ಮಕ್ಕಳು, ಮಹಿಳೆಯರು ಸಂಕಷ್ಟಕ್ಕೊಳಗಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲ ವರ್ಷಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಸಹಾಯಕ ಕಮೀಶನರ್ ಮಣ್ಣು ತೆಗೆದ ಜಾಗಕ್ಕೆ ಕಲ್ಲುಕಟ್ಟಿ ಕೊಡುವಂತೆ ಸೂಚಿಸಿದ್ದರು. ಅದರಂತೆ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೆ ಇರುವುದರಿಂದ ರಸ್ತೆಯ ಬದಿ ಮತ್ತೆ ಮತ್ತೆ ಜರಿದು ಬಿದ್ದು ಅನಾಹುತಗಳಿಗೆ ಅವಕಾಶವಾಗುತ್ತಿದೆ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.