Friday, January 24, 2025
ಸುದ್ದಿ

ಕುಡಿದು ದೇಗುಲದ ಗೋಡೆಗೆ ಮೂತ್ರ ವಿಸರ್ಜನೆ : ಪ್ರಶ್ನಿಸಿದ ಬಾಲಕನಿಗೆ ಆಕ್ಸಿಡೆಂಟ್ ಮಾಡಿ ಕೊಲೆಗೈದ ಪಾಪಿ – ಕಹಳೆ ನ್ಯೂಸ್

ಕೇರಳ : ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ 10ನೇ ತರಗತಿ ಬಾಲಕನನ್ನು ಅಪಘಾತ ಮಾಡಿ ಕೊಲೆ ಮಾಡಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಮೃತ ಬಾಲಕನನ್ನು ಅದಿಶೇಖರ್ (15) ಎಂದು ಗುರುತಿಸಲಾಗಿದೆ. ಸಂಬ0ಧಿಕನೇ ಈತನನ್ನು ಕೊಲೆ ಮಾಡಿರುವುದು ಬಯಲಾಗಿದೆ. ಅರುಣ್ ಕುಮಾರ್ ಹಾಗೂ ದೀಪಾ ಮಗನಾಗಿರುವ ಅದಿಶೇಖರ್, ಆಗಸ್ಟ್ 31ರಂದು ಮೃತಪಟ್ಟಿದ್ದಾನೆ. ಈತ ಕತ್ತಕ್ಕಡ ಚಿನ್ಮಯ ಮಿನ್ ಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆ ಪುಳಿಂಕೋಡ್ ದೇವಸ್ಥಾನದ ಬಳಿ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ. ಮೊದಲು ಇದೊಂದು ಅಪಘಾತ ಎಂದು ಬಿಂಬಿಸಿದ್ದರೂ, ಸಿಸಿಟಿಯಲ್ಲಿ ಕೃತ್ಯದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಇದು ಅಪಘಾತ ಅಲ್ಲ ಕೊಲೆ ಎಂಬುದು ಬಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು