ಮಂಗಳೂರು: ಇತ್ತೀಚಿಗೆ ಮಂಗಳೂರಿನಲ್ಲಿ ತಲ್ವಾರಿನ ಚಕಮಕಿ ನಡೆದಿತ್ತು. ನಗರದ ಕೈಕಂಬ ಬಳಿಯ ಸುರಲ್ಪಾಡಿ ಎಂಬಲ್ಲಿನ ಯುವಕ ಹರೀಶ್‍ನ ಮೇಲೆ ದುಷ್ಕರ್ಮಿಗಳು ಹಲ್ಲೆಯನ್ನು ನಡೆಸಿದ್ರು. ಈ ಪ್ರಕರಣವನ್ನು ಬೇಧಿಸಿದ ಪೊಲೀಸರು ಕೊಲೆಯತ್ನ ಮಾಡಲು ಪ್ರಯತ್ನಿಸಿದ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಯುವಕರಾದ ಮಹಮ್ಮದ್ ಶಮೀರ್, ಇಷಾನ್ ಮತ್ತು ಮಹಮ್ಮದ್ ಖಾಲಿದ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರಿಂದ ಹತ್ಯೆಮಾಡಲು ಬಳಸಿದ ಮೋಟಾರ್ ಸೈಕಲ್ ಹಾಗೂ ಮೊಬೈಲ್ ಪೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ.