1722 ನೇ ಮಧ್ಯವರ್ಜನ ಶಿಬಿರದ 4ನೇ ದಿನ ಶಿಬಿರಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಗಾರ – ಕಹಳೆ ನ್ಯೂಸ್
ವಿಟ್ಲ : ಅಕ್ಷಯ ಸಮುದಾಯ ಭವನದಲ್ಲಿ ನಡೆಯುತ್ತಿರುವ 1722 ನೇ ಮಧ್ಯವರ್ಜನ ಶಿಬಿರದ 4ನೇ ದಿನದಲ್ಲಿ ಶಿಬಿರಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾಕ್ಟರ್ ನಾರಾಯಣ ಭಟ್ ಪುತ್ತೂರು ಹಾಗೂ ಅಳಿಕೆ ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಅವರು ಕೌಟುಂಬಿಕ ಜವಾಬ್ದಾರಿ & ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಶಿಬಿರಾರ್ಥಿಗಳ ಮನೆಯವರಿಗೆ ಜ್ಞಾನದೀಪ ಶಿಕ್ಷಕಿ ರೇಣುಕಾ ಕಾಣಿಯೂರು ಹಾಗೂ ಅರೋಗ್ಯ ಸಹಾಯಕಿ ನೇತ್ರಾವತಿ ಕೌಟುಂಬಿಕ ಸಲಹೆ ನೀಡಿದರು. ವಿಟ್ಲ ತಾಲೂಕು ಯೋಜನೆ ಅಧಿಕಾರಿ ಚೆನ್ನಪ್ಪ ಗೌಡ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ,ಶಿಬಿರ ಅಧಿಕಾರಿ ದೇವಿ ಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು.
ಮುಡಿಪು ವಲಯ ಮೇಲ್ವಿಚಾರಕ ಗಂಗಾಧರ್, ಸಾಲೆತ್ತೂರ್ ವಲಯ ಮೇಲ್ವಿಚಾರಕಿ ಮೋಹಿನಿ, ಯವರು ದಿನದ ಕರ್ತವ್ಯ ನಿರ್ವಹಣಾ ಜವಾಬ್ದಾರಿ ಹೊಂದಿದ್ದು ಎರಡು ವಲಯಗಳ ಸೇವಾ ಪ್ರತಿನಿಧಿಗಳು,, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳು, ಜನಜೀವನ ಸಮಿತಿಯ ಸದಸ್ಯರು ದೈನಂದಿನ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಸಹಕರಿಸಿದರು.