Thursday, January 23, 2025
ಸುದ್ದಿ

ಸೆ.12ರಂದು ನೆಲ್ಯಾಡಿ ಶ್ರೀ ರಾಮ ವಿದ್ಯಾಲಯದ ನೂತನ ತರಗತಿ ಕೊಠಡಿಗಳ ಲೋಕಾರ್ಪಣೆ ಮತ್ತು ಆಂಗ್ಲ ಮಾಧ್ಯಮ ತರಗತಿಯ ಆರಂಭೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಕಡಬ : ನೆಲ್ಯಾಡಿ ಶ್ರೀ ರಾಮ ವಿದ್ಯಾಲಯದ ನೂತನ ತರಗತಿ ಕೊಠಡಿಗಳ ಲೋಕಾರ್ಪಣಾ ಕಾರ್ಯಕ್ರಮ ಮತ್ತು ಆಂಗ್ಲ ಮಾಧ್ಯಮ ತರಗತಿಯ ಆರಂಭೋತ್ಸವವು ಸೆ.12ರಂದು ನಡೆಯಲಿದೆ.

ಪುತ್ತೂರು ವಿದ್ಯಾವರ್ಧಕ ಸಂಘ (ರಿ) ನ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ವಿಧಾನಪರಿಷತ್ ನ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೊಠಡಿಗಳ ಲೋಕಾರ್ಪಣೆ ನೇರವೇರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ, ಸೌತ್ ಇಂಡಿಯಾ ರೀಜನಲ್ ಡೈರೆಕ್ಟರ್ ವಿಶ್ವಾಸ್ ಯು.ಎಸ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ನ ನಿರ್ದೇಶಕರಾದ ಶ್ರೀ ಕೃಷ್ಣ ಶೆಟ್ಟಿ ಕಡಬ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು