Thursday, January 23, 2025
ಸುದ್ದಿ

ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ ಅದನ್ನು ನಡೆಸುವ ತಮಿಳುನಾಡು ಸರಕಾರ ಸನಾತನ ಧರ್ಮದ ದೇವಸ್ಥಾನಗಳನ್ನು ಕೂಡ ನಾಶ ಮಾಡುವುದೇ ? – ಗಾಯತ್ರಿ ಎನ್. ಸಂಸ್ಥಾಪಕಿ ಭಾರತ ವಾಯ್ಸ್

ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇವುಗಳ ಹಾಗೆ ನಾಶವಾಗುವುದೆ ?

ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ ಅದನ್ನು ನಡೆಸುವ ತಮಿಳುನಾಡು ಸರಕಾರ ಸನಾತನ ಧರ್ಮದ ದೇವಸ್ಥಾನಗಳನ್ನು ಕೂಡ ನಾಶ ಮಾಡುವುದೇ ? – ಗಾಯತ್ರಿ ಎನ್. ಸಂಸ್ಥಾಪಕಿ ಭಾರತ ವಾಯ್ಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನನ್ನು ಕ್ರೈಸ್ತ ಎಂದುಕೊಳ್ಳುವ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮ ನಾಶ ಮಾಡಲಿಕ್ಕಿದೆ; ಆದರೆ ದ್ರಾವಿಡ ವಿಚಾರಸರಣಿಯಿಂದ ನಡೆಯುವ ತಮಿಳುನಾಡು ಸರಕಾರಕ್ಕೆ ಅಲ್ಲಿಯ ಜಾತಿಯತೆ ನಾಶ ಮಾಡಲು ಸಾಧ್ಯವಾಗಿಲ್ಲ . ತದ್ವಿರುದ್ಧ ಅದು ಇನ್ನೂ ಹೆಚ್ಚು ಬೆಳೆದು ನಿಂತಿದೆ. ಅಲ್ಲಿಯ ಹಿಂದೂಗಳು ಇಂದು ಅಸಹಾಯಕರಾಗಿದ್ದಾರೆ. ತಮಿಳುನಾಡಿನಲ್ಲಿ ಅತಿಕ್ರಮಣದ ಹೆಸರಿನಲ್ಲಿ ಹಿಂದುಗಳ ಪ್ರಾಚೀನ ದೇವಸ್ಥಾನಗಳನ್ನು ನೆಲಸಮ ಮಾಡಲಾಗುತ್ತಿದೆ ; ಆದರೆ ಚರ್ಚ್ ಮತ್ತು ಮಸೀದಿ ಇವುಗಳ ಸುದ್ದಿಗೆ ಹೋಗುವುದಿಲ್ಲ. ದ್ರಮುಕ ಸರಕಾರಕ್ಕೆ ಹಿಂದುಗಳಲ್ಲಿನ ಭೇದಭಾವ ಕಾಣುತ್ತದೆ ; ಆದರೆ ಚರ್ಚಗಳಲ್ಲಿನ ಭೇದಭಾವ ಏಕೆ ಕಾಣುವುದಿಲ್ಲ ? ತಮಿಳುನಾಡಿನಲ್ಲಿನ ದೇವಸ್ಥಾನಗಳ ಸರಕಾರಿಕರಣ ಮಾಡಲಾಗಿದೆ ಮತ್ತು ದೇವಸ್ಥಾನ ನಡೆಸುವ ಸರಕಾರದಲ್ಲಿನ ಸಚಿವರು ಸನಾತನ ಧರ್ಮ ನಾಶ ಮಾಡಲು ಕಾಯುತ್ತಿದ್ದಾರೆ, ಹೀಗೆ ಸರಕಾರ ಹಿಂದುಗಳ ದೇವಸ್ಥಾನ ನಡೆಸುವುದೋ ಅಥವಾ ಅವುಗಳನ್ನು ನಾಶ ಮಾಡುವುದೋ ? ಎಂದು ಭಾರತ ವಾಯ್ಸ್ ನ ಸಂಸ್ಥಾಪಕಿ ಗಾಯತ್ರಿ ಎನ್ ಇವರು ಸವಾಲು ಹಾಕಿದರು. ಸನಾತನ ಧರ್ಮ ಡೆಂಗ್ಯೂ ಮಲೇರಿಯಾ ಇವುಗಳ ಹಾಗೆ ನಾಶ ಆಗುವುದೇ ? ಈ ವಿಷಯದ ಕುರಿತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿರುವ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ದಿಲ್ಲಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಇವರು ಅವರ ಜೊತೆಗೆ ಸಂವಾದ ನಡೆಸಿದರು.

ಅಧಿಕಾರದ ಲಾಲಸೆಯಿಂದ ಸನಾತನ ಧರ್ಮವನ್ನು ಟೀಕಿಸುವುದು !
ಈ ಸಮಯದಲ್ಲಿ ಪಿ ಗುರುಜ್ ಹೋಸ್ಟ್ ಮೆಗಾ ಟಿವಿಯ ಮಾಜಿ ವರದಿಗಾರ ಜೆ.ಕೆ.ಇವರು , ದ್ರಮುಕ ಪಕ್ಷದ ದ್ರಾವಿಡ ಸಂಸ್ಕೃತಿಯ ವಿಚಾರಧಾರೆ ಸನಾತನ ವಿರೋಧಿಯಾಗಿದೆ. ಇದರಿಂದ ಅವರು ಮೊದಲು ಬ್ರಾಹ್ಮಣರನ್ನು ವಿರೋಧಿಸಿದರು, ನಂತರ ಹಿಂದೂ ದೇವತೆಗಳ ಮೂರ್ತಿಗಳನ್ನು ನಾಶ ಮಾಡಿದರು, ದೇವತೆಗಳ ಅಪಮಾನ ಮಾಡಿದರು. ಇದೆಲ್ಲಾ ಮಾಡಿರುವುದರಿಂದ ಅಧಿಕಾರ ದೊರೆತಿದೆ, ಎಂದು ದ್ರಮುಕರ ನಾಯಕರಿಗೆ ಅನಿಸುತ್ತಿದೆ. ಸನಾತನ ಧರ್ಮ ನಾಶವಾಗಬೇಕು, ಎಂದು ಹೇಳಿಕೆ ನೀಡಿರುವುದು, ಇದು ಕೂಡ ಇದೇ ವಿರೋಧದ ಒಂದು ಭಾಗವಾಗಿದೆ. ಇಂದು ಹಿಂದೂುಗಳು ಸಂಘಟಿತರಾಗಿ ಇದನ್ನು ವಿರೋಧಿಸಬೇಕು. ದ್ರಮುಕದ ಸಮರ್ಥಕರು ಭಾರತದ ಸ್ವಾತಂತ್ರ್ಯ ದಿನವನ್ನು ಕಪ್ಪು ದಿನ ಎಂದು ತಿಳಿಯುತ್ತಾರೆ. ಅವರಿಗೆ ತಮಿಳುನಾಡಿನಲ್ಲಿ ಬ್ರಿಟಿಷರ ಅಧಿಕಾರ ಬೇಕಿತ್ತು. ವಿರೋಧೀಪಕ್ಷದವರು ರಾಷ್ಟ್ರೀಯ ಮಟ್ಟದಲ್ಲಿ I.N.D.I.A. ಹೆಸರಿನ ಮೈತ್ರಿಕೂಟ ಮಾಡಿಕೊಂಡಿದ್ದಾರೆ. ಈ ಮೈತ್ರಿಕೂಟದ ನಾಯಕರ ಮೇಲೆ ಒತ್ತಡ ಹೇರಿ ಇನ್ನೂ ಹೆಚ್ಚಿನ ಜಾಗಗಳನ್ನು ಕಬಳಿಸುವುದು ಮತ್ತು ಮೈತ್ರಿಕೂಟದ ಪ್ರಧಾನಮಂತ್ರಿ ಸ್ಥಾನಕ್ಕಾಗಿ ದಾವೆ ಮಾಡುವುದು, ಇದಕ್ಕಾಗಿ ಈ ರೀತಿಯ ಹೇಳಿಕೆಗಳುನ್ನು ನೀಡಲಾಗುತ್ತಿದೆ, ಎಂದು ಕೂಡ ಅವರು ಹೇಳಿದರು.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಪೂರ್ವೋತ್ತರ ಭಾರತದ ಸಂಘಟಕ ಶ್ರೀ. ಶಂಭೂ ಗವಾರೆ ಇವರು, ಸನಾತನ ಧರ್ಮದ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿದ ನಂತರ ಕೂಡ ತಮಿಳುನಾಡಿನಲ್ಲಿ ಉದಯನಿಧಿ ಸ್ಟಾಲಿನ್ ಇವರ ವಿರುದ್ಧ ಒಂದೇ ಒಂದು ದೂರು ಕೂಡ ದಾಖಲಿಸಲಾಗಿಲ್ಲ. ತದ್ವಿರುದ್ಧ ಉದಯನಿಧಿ ಇವರ ಆಕ್ಷೇಪಾರ್ಹ ಹೇಳಿಕೆಯನ್ನು ವಿರೋಧಿಸುವ ಮತ್ತು ಪ್ರತಿಭಟನೆ ನಡೆಸುವ ಹಿಂದುಗಳ ಮೇಲೆ ಮತ್ತು ಹಿಂದೂ ಸಂಘಟನೆಗಳ ಮೇಲೆ ದೂರು ದಾಖಲಿಸಿ ಅವರನ್ನು ಬಂಧಿಸಲಾಗುತ್ತಿದೆ. ಈ ಘಟನೆಗಳು ಅತ್ಯಂತ ದುರದೃಷ್ಠಕರವಾಗಿವೆ. ಈ ಪ್ರತಿಭಟನೆಯ ಬಗ್ಗೆ ಗಮನ ಹರಿಸಿ ಉದಯನಿಧಿ ಸ್ಟಾಲಿನ್ ಮತ್ತು ಇತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ .

ನಿಮ್ಮ ವಿನಮ್ರ,
ಶ್ರೀ. ರಮೇಶ ಶಿಂದೆ,
ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ,
(ಸಂಪರ್ಕ : 9987966666 )