Sunday, November 24, 2024
ಸುದ್ದಿ

ಪಂಚಭೂತಗಳಲ್ಲಿ ಲೀನರಾದ ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಅಧ್ಯಕ್ಷ ಎಸ್.ವಿ ಭಟ್ : ಸಾಹಿತಿಗಳಿಂದ ಅಂತಿಮ ದರ್ಶನ – ಕಹಳೆ ನ್ಯೂಸ್

ಕಾಸರಗೋಡು: ಕನ್ನಡದ ಕಟ್ಟಾಳು, ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷ ಎಸ್.ವಿ ಭಟ್ ರ ಅಕಾಲಿಕ ನಿಧನದ ಸುದ್ದಿ ತಿಳಿದು ಇಂದು ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿಯವರು ಕಾಸರಗೋಡು ಬೀರಂತಬೈಲಿನಲ್ಲಿರುವ ಎಸ್.ವಿ ಭಟ್ ರ ಮನೆಗೆ ಆಗಮಿಸಿ, ಕನ್ನಡ ಧ್ವಜದ ವಸ್ತ್ರವನ್ನು ಮೃತದೇಹದ ಮೇಲಿಟ್ಟು, ಗೌರವಿಸಿ, ಪುಷ್ಮನಮನಗೈದು, ಅಂತಿಮ ನಮನ ಸಲ್ಲಿಸಿ, ಸಂತಾಪ ಸೂಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಕ್ಯಾಂಪ್ಕೊ ನಿರ್ದೇಶಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪಿ. ಶ್ರೀನಾಥ್, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಗೌರವ ಕಾರ್ಯದರ್ಶಿ ಡಾ. ಮುರಳಿ ಮೋಹನ್ ಚೂಂತಾರ್, ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಗೌರವ ಕಾರ್ಯದರ್ಶಿ ಪಿ. ರಾಮಚಂದ್ರ ಭಟ್ ಜತೆಗಿದ್ದರು. ಬೆಳಗ್ಗಿನಿಂದಲೇ ವಿವಿಧ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪಧಾಧಿಕಾರಿಗಳು, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯ ಲೋಕದ ದಿಗ್ಗಜರುಗಳು, ಒಡನಾಡಿಗಳು, ಆಪ್ತರು, ಮನೆಗೆ ಭೇಟಿ ನೀಡಿ ಎಸ್.ವಿ ಭಟ್ ರಿಗೆ ಅಂತಿಮ ನಮನ ಸಲ್ಲಿಸಿ, ಮನೆಯವರನ್ನು ಸಂತೈಸುತ್ತಿದ್ದರು. ಬಳಿಕ ಅಂತ್ಯ ಸಂಸ್ಕಾರವು ಕಾಸರಗೋಡುವಿನ ಪಲ್ಲಂ ನಲ್ಲಿರುವ ಸಾರ್ವಜನಿಕ ರುದ್ರ ಭೂಮಿಯಲ್ಲಿ ನಡೆಯಿತು. ಎಸ್.ವಿ ಭಟ್ ರ ಪುತ್ರ ಡಾ. ಮುರಳಿಧರ್ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ನೀಡಿದರು. ಪಂಚಭೂತಗಳಲ್ಲಿ ಲೀನರಾದ ಎಸ್.ವಿ ಭಟ್ ರಿಗೆ ಕಾಸರಗೋಡಿನ ಸಹಸ್ರಾರು ಕನ್ನಡಿಗರು ಕಂಬನಿ ಮಿಡಿದರು.