ಮಂಗಳೂರು: ನಾಡಿನ ಹಾಗೂ ಹಿಂದೂಗಳ ಅತ್ಯಂತ ಪ್ರಮುಖ ಹಬ್ಬವಾಗಿರುವ ಗಣೇಶ ಚತುರ್ಥಿಯು ಈ ಬಾರಿ ಸೆ.19ರಂದು ಇರುವುದರಿಂದ ಸರಕಾರಿ ರಜೆಯನ್ನು ಅಂದೇ ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ವರ್ಷದ ಸರಕಾರಿ ರಜೆಗಳ ಪಟ್ಟಿಯಲ್ಲಿ ಸೆ.18 ರಂದು ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಪ್ರಕಟಿಸಲಾಗಿದೆ. ಆದರೆ ನಾಡಿನೆಲ್ಲೆಡೆ ಧಾರ್ಮಿಕವಾಗಿ ಸೆ.19 ರಂದು ಹಬ್ಬದ ಆಚರಣೆ ಇರುವುದರಿಂದ ಆ ದಿನವನ್ನು ಕರ್ತವ್ಯದ ದಿನ ಎಂದು ಪರಿಗಣಿಸಿದರೆ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡAತಾಗುತ್ತದೆ.
ಸದಾ ಹಿಂದೂಗಳ ಹಬ್ಬದ ವಿಷಯದಲ್ಲಿ ಏಕಪಕ್ಷೀಯವಾಗಿ ವರ್ತಿಸುವ ಕಾಂಗ್ರೆಸ್ ತನ್ನ ಹಳೆಯ ಜಾಯಮಾನವನ್ನು ಬಿಟ್ಟು ಗಣೇಶ ಚತುರ್ಥಿ ರಜೆಯನ್ನು ಸೆ.19 ರಂದೇ ನೀಡಿ ಎಲ್ಲರೂ ಕುಟುಂಬದ ಜೊತೆಗೂಡಿ ಸಂಭ್ರಮದಿAದ ಹಬ್ಬ ಆಚರಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದೆಯೂ ದಸರಾ ಹಬ್ಬದ ರಜೆಯಲ್ಲಿ ವ್ಯತ್ಯಾಸವಾಗಿದ್ದಾಗ ಶಾಸಕ ವೇದವ್ಯಾಸ ಕಾಮತ್ ಅವರು ವಿಶೇಷ ಮುತುವರ್ಜಿ ವಹಿಸಿ ರಜೆ ಮಾರ್ಪಾಡುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.