Wednesday, January 22, 2025
ಬೆಂಗಳೂರುರಾಜ್ಯಸುದ್ದಿ

ಭಾಸ್ಕರ್ ನಾಯ್ಕ್ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಂಡದ‌ ಹಲ್ಲೆ ಪ್ರಕರಣ ; ಕ್ರಮ ಕೈಗೊಳ್ಳದ ಪೋಲೀಸ್ ಇಲಾಖೆ – ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ – ನಾಳೆ ವಿಚಾರಣೆ – ಕಹಳೆ ನ್ಯೂಸ್

ಬೆಂಗಳೂರು : ಸೌಜನ್ಯ ಪ್ರಕರಣದ ವಿವಾದ ತಾರಕಕ್ಕೇರಿದ್ದು, ಸುಳ್ಳು ಆರೋಪ ಪ್ರತ್ಯಾರೋಪ ಮುಗಿಲುಮುಟ್ಟಿದೆ. ಈ ನಡುವೆ ಖಾಸಗಿ ಯುಟೂಬ್ ವಾಹಿನಿಯೊಂದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮುಂಬೈಯಲ್ಲಿನ ಅಕ್ರಮಗಳ ಬಗ್ಗೆ ಮಾತನಾಡಿದ ಭಾಸ್ಕರ್ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆಯನ್ನು ತಿಮರೋಡಿ ಮತ್ತು ತಂಡದವರು ನಡೆಸಿದ್ದಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದ್ದು, ಈ ಬಗ್ಗೆ ಒಂದು ವಾರಕಳೆದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಆರೋಪಿಗಳನ್ನು ರಾಜರೋಶವಾಗಿ ತಿರುಗುತ್ತಿದ್ದು, ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಸಂತ್ರಸ್ಥರಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಸಂತ್ರಸ್ತ ಭಾಸ್ಕರ್ ಅವರು ಹೈಕೋರ್ಟ್ ಮೊರೆ ಹೋಗಿದ್ದು, ನಾಳೆ ಅವರ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ವರದಿಗಾರರು ತಿಳಿಸಿರುತ್ತಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು