Wednesday, January 22, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಮಹೇಶ್ ಶೆಟ್ಟಿ ತಿಮರೋಡಿ ಮತ್ತು‌ ತಂಡದಿಂದ ಭಾಸ್ಕರ್ ನಾಯ್ಕ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ : ಪೋಲೀಸರ ನಡೆಗೆ ಅಸಮಾಧಾನ, ಮೂರು ದಿನದ‌ ಒಳಗೆ ( ಸೆ.15 ) ತನಿಖಾ ವರದಿ ಸಲ್ಲಿಸಲು ಪೋಲೀಸರಿಗೆ ಖಡಕ್ ಸೂಚನೆ ನೀಡಿದ ಹೈಕೋರ್ಟ್ – ಕಹಳೆ ನ್ಯೂಸ್

ಬೆಂಗಳೂರು : ಸೌಜನ್ಯ ಪ್ರಕರಣದ ವಿವಾದ ತಾರಕಕ್ಕೇರಿದ್ದು, ಸುಳ್ಳು ಆರೋಪ ಪ್ರತ್ಯಾರೋಪ ಮುಗಿಲುಮುಟ್ಟಿದೆ. ಈ ನಡುವೆ ಖಾಸಗಿ ಯುಟೂಬ್ ವಾಹಿನಿಯೊಂದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮುಂಬೈಯಲ್ಲಿನ ಅಕ್ರಮಗಳ ಬಗ್ಗೆ ಮಾತನಾಡಿದ ಭಾಸ್ಕರ್ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆಯನ್ನು ತಿಮರೋಡಿ ಮತ್ತು ತಂಡದವರು ನಡೆಸಿದ್ದಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದ್ದು, ಈ ಬಗ್ಗೆ ಒಂದು ವಾರಕಳೆದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಆರೋಪಿಗಳು ರಾಜರೋಶವಾಗಿ ತಿರುಗುತ್ತಿದ್ದು, ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಸಂತ್ರಸ್ಥರಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಸಂತ್ರಸ್ತ ಭಾಸ್ಕರ್ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಇಂದು ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪೋಲೀಸರ ನಡೆಗೆ ಕಳವಳ ವ್ಯಕ್ತಪಡಿಸಿದ್ದು, ಇದೇ ತಿಂಗಳು 15ಕ್ಕೆ ತನಿಖಾ ವರದಿ ಸಲ್ಲಿಸಲು ಪೋಲೀಸರಿಗೆ ಖಡಕ್ ಸೂಚನೆ ನೀಡಿದೆ ಎಂದು ವರದಿಗಾರರು ತಿಳಿಸಿರುತ್ತಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು