ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಾಂತರದ 6 ಅಂಗನವಾಡಿ ಕೇಂದ್ರಗಳಾದ ಪುಚ್ಚೇರಿಕಟ್ಟೆ, ಕೋಟೆಬಾಗಿಲು, ಅಲಂಗಾರು, ಮೂಡುಬಿದಿರೆ ಪೇಟೆ, ಮರಿಯಾಡಿ, ಜೈನ್ ಪೇಟೆ, ಸಹಯೋಗದಲ್ಲಿ ಪೋಷಣ್ ಅಭಿಯಾನ ಯೋಜನೆಯ ಅಡಿಯಲ್ಲಿ ಪುಚ್ಚೇರಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಪೌಷ್ಠಿಕ ಆಹಾರ ಸಪ್ತಾಹ ನಡೆಯಿತು.
ಪುರಸಭೆ ಸದಸ್ಯ ಪುರಂದರ ದೇವಾಡಿಗ ಅವರು ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ ಸರಕಾರದಿಂದ ಸಿಗುವಂತಹ ಗರ್ಭಿಣಿ, ಬಾಣಂತಿ, ಮಕ್ಕಳ ಆಹಾರದ ಪ್ರಯೋಜವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಸಮುದಾಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಅವರು ಆರೋಗ್ಯಕ್ಕೆ ಪೌಷ್ಠಿಕ ಆಹಾರದ ಪ್ರಮುಖ್ಯತೆ ಸಿರಿಧ್ಯಾನ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತಮ್ಮ ಅವರುಗರ್ಭಿಣಿ, ಮಕ್ಕಳ ಚುಚ್ಚುಮದ್ದಿನ ಕುರಿತು ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿರ್ತಾಡಿ ವಲಯದ ಮೇಲ್ವಿ ಚಾರಕಿ ಶುಭ, ಪುರಸಭಾ ಸದಸ್ಯರುಗಳಾದ ಪುರಂದರ ದೇವಾಡಿಗ, ಮಮತಾ ಅನಂದ್, ಶ್ವೇತಾ ಪ್ರವೀಣ್ ಜೈನ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಸರಿತಾ, ಸುಷ್ಮಾ, ರಶೀದಾ ಅಂಗನವಾಡಿ ಕಾರ್ಯಕರ್ತೆ ವಿಜಯ, ಪ್ರಿಯದರ್ಶಿನಿ ಎಸ್ ಜೈನ್, ಸುಮತಿ ಸಹಾಯಕಿ ರಾಜಶ್ರೀ ಭಾಗವಹಿಸಿದ್ದರು. ಹಾಗೆಯೇ ಬಾಲವಿಕಾಸ ಸಮಿತಿಯ ಸದಸ್ಯರು, ಸ್ತ್ರೀಶಕ್ತಿ ಸದಸ್ಯರು, ಮಕ್ಕಳ ತಾಯಂದಿರು ಪುಟಾಣಿಗಳು ಭಾಗವಹಿಸಿದ್ದರು.
ಪೌಷ್ಟಿಕ ಆಹಾರದ ಪ್ರಾತ್ಯಕ್ಷತೆಯನ್ನು 6 ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಸದಸ್ಯರು, ಮಕ್ಕಳ ತಾಯಂದಿರು ಸ್ತ್ರೀಶಕ್ತಿ ಸದಸ್ಯರು ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕಾಂಶ ಭರಿತವಾದ ಆಹಾರವನ್ನು ಪ್ರದರ್ಶನಕ್ಕಿಟ್ಟಿದ್ದರು. ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಿ ಅಭಿನಂದಿಸಲಾಯಿತು.