Monday, November 25, 2024
ಸುದ್ದಿ

ಇತಿಹಾಸ ಪ್ರಸಿದ್ಧ ಸುಳ್ಳಮಲೆ -ಬಲ್ಲಮಲೆಯಲ್ಲಿ ಸೆ .15ರಿಂದ ಪುಣ್ಯ ಗುಹಾ ತೀರ್ಥ ಸ್ನಾನ ಆರಂಭ – ಕಹಳೆ ನ್ಯೂಸ್

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಸಮೀಪ ಸುಳ್ಳಮಲೆ -ಬಲ್ಲಮಲೆಯಲ್ಲಿ ಸೆ .15ರಿಂದ ಪುಣ್ಯ ಗುಹಾ ತೀರ್ಥ ಸ್ನಾನ ನಡೆಯಲಿದೆ.


ಇತಿಹಾಸ ಪ್ರಸಿದ್ಧ ಸುಳ್ಳಮಲೆ ಗುಹಾ ತೀರ್ಥ ಸ್ನಾನ ಸೋಣ ಅಮವಾಸ್ಯೆಯಂದು ತೀರ್ಥ ಸ್ನಾನಕ್ಕೆ ಬಿದಿರಿನ ಕೇರ್ಪು(ಏಣಿ ) ಇಡುವ ಸಂಪ್ರದಾಯದoತೆ ಸೆ.15ರಂದು ಗುಹಾ ತೀರ್ಥ ಆರಂಭಗೊoಡು ಸೆ.19ರ ಶುಕ್ಲ ಪಕ್ಷದ ಚೌತಿಯವರೆಗೆ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಗುಹಾಲಯವಿರುವ ಪ್ರದೇಶಕ್ಕೆ ವರ್ಷದಲ್ಲಿ ನಾಲ್ಕು ದಿನ ಮಾತ್ರ ಪ್ರವೇಶ. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ಇತಿಹಾಸವೂ ಇದೆ. ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯವರೆಗಿನ ಸಮಯದಲ್ಲಿ ಇಲ್ಲಿ ತೀರ್ಥಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎನ್ನುವ ನಂಬಿಕೆ ಇದೆ, ಈ ತೀರ್ಥ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚರ್ಮರೋಗಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು