Monday, November 25, 2024
ಸುದ್ದಿ

ಗಾಯಗೊಂಡ ಆನೆಗೆ ಸಿದ್ದವಾಯ್ತು ಪಾದರಕ್ಷೆ : ವೈದ್ಯರ ಶ್ರಮಕ್ಕೆ ಭೇಷ್ ಎಂದ ಪ್ರಾಣಿಪ್ರಿಯರು – ಕಹಳೆ ನ್ಯೂಸ್

ಮೈಸೂರು : ಪಾದಕ್ಕೆ ಗಾಯವಾಗಿ ನಡೆಯಲಾಗದೇ ಒದ್ದಾಡುತ್ತಿದ್ದ ಆನೆಗೆ ಪಶುವೈದ್ಯರೊಬ್ಬರು ಪಾದರಕ್ಷೆ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಮಣಬಾರದ ಆನೆಗೆ ಪಾದರಕ್ಷೆ ತಯಾರಿಸಲು ಸಾಧ್ಯವೇ ಎಂಬ ಅನುಮಾನಕ್ಕೆ ಈ ಪಶು ವೈದ್ಯ ತೆರೆ ಎಳೆಯುವಲ್ಲಿ ಸಕ್ಸಸ್ ಕಂಡಿದ್ದಾರೆ. ವೈದ್ಯರ ವೈಯಕ್ತಿಕ ಆಸ್ಥೆಯಿಂದ ಪಶು ವೈದ್ಯರು ಪಾದರಕ್ಷೆ ತಯಾರಿಸಿದ್ದು, ಇದರ ಸಹಾಯದಿಂದ ಆನೆ ಮತ್ತೆ ನಡೆಯಲು ಪ್ರಾರಂಭಿಸಿದೆ. ಚಿಕಿತ್ಸೆ ಮೂಲಕ ಆನೆಗೆ ಮರುಜೀವ ನೀಡಿದ ಪಶುವೈದ್ಯನ ಕಾರ್ಯಕ್ಕೆ ಪ್ರಾಣಿ ಪ್ರಿಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯ ಹುಣಸೂರು ವನ್ಯಜೀವಿ ವಿಭಾಗದ ದೊಡ್ಡಹರವೆ ಆನೆ ಕ್ಯಾಂಪ್‌ನಲ್ಲಿ ಕುಮಾರಿ ಎಂಬ ಹೆಣ್ಣಾನೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಈ ಆನೆಯನ್ನು ಸರ್ಕಸ್ ಕಂಪನಿ ಒಂದರಿAದ ರಕ್ಷಣೆ ಮಾಡಿ ಕರೆ ತರಲಾಗಿತ್ತು. ಸುಮಾರು 60 ವರ್ಷ ವಯಸ್ಸಿನ ಕುಮಾರಿ ಎಂಬ ಆನೆಯ ಮುಂದಿನ ಬಲಭಾಗದ ಕಾಲಿಗೆ ಗಾಯವಾಗಿತ್ತು. ಈ ಗಾಯದಿಂದ ಆನೆ ನಡೆದಾಡುವುದಕ್ಕೂ ಸಂಕಷ್ಟ ಪಡುತಿತ್ತು. ನೋವಿನಿಂದಾಗಿ ಪ್ರತಿ ಹೆಜ್ಜೆಯನ್ನು ಕಷ್ಟಪಟ್ಟು ಪ್ರಯಾಸದಿಂದ ಇಡುತ್ತಿತ್ತು. ಈ ಸಂಬAಧ ಪಶು ವೈದ್ಯರು ಆನೆಗೆ ಚಿಕಿತ್ಸೆ ನೀಡಿ, ಶೀಘ್ರ ಗುಣಮುಖವಾಗುವಂತೆ ಕಾರ್ಯೋನ್ಮುಖವಾಗಿದ್ದರು. ಈ ಸಂದರ್ಭದಲ್ಲಿ, ಆನೆಯ ಪಾದಕ್ಕೆ ಔಷಧ ಹಾಕಿದರೂ ಆ ಔಷಧ ಮಾತ್ರ ನಿಲ್ಲುತ್ತಲೇ ಇರುತ್ತಿರಲಿಲ್ಲ. ಇದರಿಂದ ಗಾಯ ವಾಸಿಯಾಗದೇ ಆನೆ ಮತ್ತಷ್ಟು ನೋವು ಅನುಭವಿಸುವಂತೆ ಆಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬAಧ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ. ರಮೇಶ್ ಅವರು ಆನೆಗೆ ಪಾದರಕ್ಷೆಯೊಂದನ್ನು ತಯಾರಿಸಿದ್ದಾರೆ. ಗಾಯಗೊಂಡ ಆನೆಯ ಬಲಭಾಗದ ಪಾದಕ್ಕೆ ವಾಹನದ ಟೈರ್‌ನ ರಬ್ಬರ್‌ನಿಂದ ಪಾದರಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಬಳಿಕ ಆನೆಯ ಪಾದಕ್ಕೆ ಈ ಪಾದರಕ್ಷೆಯನ್ನು ಕಟ್ಟಿದ್ದಾರೆ. ಇದರಿಂದಾಗಿ ಆನೆ ನಡೆಯಲು ಆರಂಭಿಸಿದೆ. ಈ ನಡುವೆ ಗಾಯಗೊಂಡಿರುವ ಆನೆಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಗಾಯ ಕಡಿಮೆಯಾಗಿ ಆನೆ ನಡೆಯಲು ಆರಂಭಿಸಿದೆ ಎಂದು ಪಶುವೈದ್ಯ ಡಾ. ರಮೇಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಸರ್ಕಸ್ ಕಂಪನಿಯಿAದ ವಶಪಡಿಸಿಕೊಂಡಿದ್ದ ಆನೆ : 2015ರಲ್ಲಿ ಕುಮಾರಿ ಆನೆಯನ್ನು ಸರ್ಕಸ್ ಕಂಪನಿಯವರಿAದ ವಶಕ್ಕೆ ಪಡೆಯಲಾಗಿತ್ತು. ಮೈಸೂರು ಬೆಂಗಳೂರು ರಸ್ತೆಯ ಪಕ್ಕದಲ್ಲಿದ್ದ ಸರ್ಕಸ್ ಕಂಪನಿಯೊAದರಿAದ ಕುಮಾರಿ ಆನೆಯ ಜೊತೆಗೆ ನಾಲ್ಕು ಹೆಣ್ಣಾನೆಗಳನ್ನು ರಕ್ಷಿಸಲಾಗಿತ್ತುಗಾಯಗೊಂಡ ಆನೆಗೆ ಸಿದ್ದವಾಯ್ತು ಪಾದರಕ್ಷೆ : ವೈದ್ಯರ ಶ್ರಮಕ್ಕೆ ಭೇಷ್ ಎಂದ ಪ್ರಾಣಿಪ್ರಿಯರು – ಕಹಳೆ ನ್ಯೂಸ್
ಪಾದಕ್ಕೆ ಗಾಯಗೊಂಡು ನಡೆಯಲು ಕಷ್ಟಪಡುತ್ತಿದ್ದ ಹೆಣ್ಣಾನೆಯೊಂದಕ್ಕೆ ಪಶು ವೈದ್ಯರೊಬ್ಬರು ಪಾದರಕ್ಷೆ ತಯಾರಿಸಿ ಗಮನ ಸೆಳೆದಿದ್ದಾರೆ.

ಮೈಸೂರು : ಪಾದಕ್ಕೆ ಗಾಯವಾಗಿ ನಡೆಯಲಾಗದೇ ಒದ್ದಾಡುತ್ತಿದ್ದ ಆನೆಗೆ ಪಶುವೈದ್ಯರೊಬ್ಬರು ಪಾದರಕ್ಷೆ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಮಣಬಾರದ ಆನೆಗೆ ಪಾದರಕ್ಷೆ ತಯಾರಿಸಲು ಸಾಧ್ಯವೇ ಎಂಬ ಅನುಮಾನಕ್ಕೆ ಈ ಪಶು ವೈದ್ಯ ತೆರೆ ಎಳೆಯುವಲ್ಲಿ ಸಕ್ಸಸ್ ಕಂಡಿದ್ದಾರೆ. ವೈದ್ಯರ ವೈಯಕ್ತಿಕ ಆಸ್ಥೆಯಿಂದ ಪಶು ವೈದ್ಯರು ಪಾದರಕ್ಷೆ ತಯಾರಿಸಿದ್ದು, ಇದರ ಸಹಾಯದಿಂದ ಆನೆ ಮತ್ತೆ ನಡೆಯಲು ಪ್ರಾರಂಭಿಸಿದೆ. ಚಿಕಿತ್ಸೆ ಮೂಲಕ ಆನೆಗೆ ಮರುಜೀವ ನೀಡಿದ ಪಶುವೈದ್ಯನ ಕಾರ್ಯಕ್ಕೆ ಪ್ರಾಣಿ ಪ್ರಿಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಜಿಲ್ಲೆಯ ಹುಣಸೂರು ವನ್ಯಜೀವಿ ವಿಭಾಗದ ದೊಡ್ಡಹರವೆ ಆನೆ ಕ್ಯಾಂಪ್‌ನಲ್ಲಿ ಕುಮಾರಿ ಎಂಬ ಹೆಣ್ಣಾನೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಈ ಆನೆಯನ್ನು ಸರ್ಕಸ್ ಕಂಪನಿ ಒಂದರಿAದ ರಕ್ಷಣೆ ಮಾಡಿ ಕರೆ ತರಲಾಗಿತ್ತು. ಸುಮಾರು 60 ವರ್ಷ ವಯಸ್ಸಿನ ಕುಮಾರಿ ಎಂಬ ಆನೆಯ ಮುಂದಿನ ಬಲಭಾಗದ ಕಾಲಿಗೆ ಗಾಯವಾಗಿತ್ತು. ಈ ಗಾಯದಿಂದ ಆನೆ ನಡೆದಾಡುವುದಕ್ಕೂ ಸಂಕಷ್ಟ ಪಡುತಿತ್ತು. ನೋವಿನಿಂದಾಗಿ ಪ್ರತಿ ಹೆಜ್ಜೆಯನ್ನು ಕಷ್ಟಪಟ್ಟು ಪ್ರಯಾಸದಿಂದ ಇಡುತ್ತಿತ್ತು. ಈ ಸಂಬAಧ ಪಶು ವೈದ್ಯರು ಆನೆಗೆ ಚಿಕಿತ್ಸೆ ನೀಡಿ, ಶೀಘ್ರ ಗುಣಮುಖವಾಗುವಂತೆ ಕಾರ್ಯೋನ್ಮುಖವಾಗಿದ್ದರು. ಈ ಸಂದರ್ಭದಲ್ಲಿ, ಆನೆಯ ಪಾದಕ್ಕೆ ಔಷಧ ಹಾಕಿದರೂ ಆ ಔಷಧ ಮಾತ್ರ ನಿಲ್ಲುತ್ತಲೇ ಇರುತ್ತಿರಲಿಲ್ಲ. ಇದರಿಂದ ಗಾಯ ವಾಸಿಯಾಗದೇ ಆನೆ ಮತ್ತಷ್ಟು ನೋವು ಅನುಭವಿಸುವಂತೆ ಆಗಿತ್ತು.

ಈ ಸಂಬoಧ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ. ರಮೇಶ್ ಅವರು ಆನೆಗೆ ಪಾದರಕ್ಷೆಯೊಂದನ್ನು ತಯಾರಿಸಿದ್ದಾರೆ. ಗಾಯಗೊಂಡ ಆನೆಯ ಬಲಭಾಗದ ಪಾದಕ್ಕೆ ವಾಹನದ ಟೈರ್‌ನ ರಬ್ಬರ್‌ನಿಂದ ಪಾದರಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಬಳಿಕ ಆನೆಯ ಪಾದಕ್ಕೆ ಈ ಪಾದರಕ್ಷೆಯನ್ನು ಕಟ್ಟಿದ್ದಾರೆ. ಇದರಿಂದಾಗಿ ಆನೆ ನಡೆಯಲು ಆರಂಭಿಸಿದೆ. ಈ ನಡುವೆ ಗಾಯಗೊಂಡಿರುವ ಆನೆಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಗಾಯ ಕಡಿಮೆಯಾಗಿ ಆನೆ ನಡೆಯಲು ಆರಂಭಿಸಿದೆ ಎಂದು ಪಶುವೈದ್ಯ ಡಾ. ರಮೇಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಸರ್ಕಸ್ ಕಂಪನಿಯಿoದ ವಶಪಡಿಸಿಕೊಂಡಿದ್ದ ಆನೆ : 2015ರಲ್ಲಿ ಕುಮಾರಿ ಆನೆಯನ್ನು ಸರ್ಕಸ್ ಕಂಪನಿಯವರಿoದ ವಶಕ್ಕೆ ಪಡೆಯಲಾಗಿತ್ತು. ಮೈಸೂರು ಬೆಂಗಳೂರು ರಸ್ತೆಯ ಪಕ್ಕದಲ್ಲಿದ್ದ ಸರ್ಕಸ್ ಕಂಪನಿಯೊAದರಿoದ ಕುಮಾರಿ ಆನೆಯ ಜೊತೆಗೆ ನಾಲ್ಕು ಹೆಣ್ಣಾನೆಗಳನ್ನು ರಕ್ಷಿಸಲಾಗಿತ್ತು