Thursday, January 23, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪೆರಾಜೆ ಶ್ರೀರಾಮಚಂದ್ರಪುರ ಮಠದಲ್ಲಿ ಅ.15ರಿಂದ ಅ.24ರವರೆಗೆ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ” ನವರಾತ್ರ ನಮಸ್ಯಾ ” ವಿಶೇಷ ಕಾರ್ಯಕ್ರಮ – ಕಹಳೆ ನ್ಯೂಸ್

ಮಾಣಿ : ಪೆರಾಜೆ ಶ್ರೀರಾಮಚಂದ್ರಪುರ ಮಠದಲ್ಲಿ ಶೋಭಕೃತ್ ಸಂವತ್ಸರದ ಆಶ್ವಯುಜ ಶುಕ್ಲ ಪಾಡ್ಯದಿಂದ ದಶಮಿ ಪರ್ಯಂತ ಅಂದರೆ ಅ.15ರ ಆದಿತ್ಯವಾರದಿಂದ ಅ.24ರ ಮಂಗಳವಾರದವರೆಗೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನವರಾತ್ರ ನಮಸ್ಯಾ ವಿಶೇಷ ಕಾರ್ಯಕ್ರಮ ನಡೆಯಲಿದೆ.


ನವರಾತ್ರಿಯ ಪರ್ವಕಾಲದಲ್ಲಿ ಶ್ರೀ ರಾಮ ಚಂದ್ರಾಪುರ ಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀ ರಾಜರಾಜೇಶ್ವರಿಯ ಮಹಾ ಸಮಾರಾಧನೆ ಜೊತೆಗೆ ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಸ್ವರ್ಣಪಾದುಕಾ ಪೂಜೆ ಸ್ವರ್ಣಭಿಕ್ಷಾಸೇವೆ ಹಾಗೂ ವಿಶೇಷವಾಗಿ ಶ್ರೀಸಂಸ್ಥಾನದವರಿoದ ಲಲಿತೋಪಾಖ್ಯಾನ ಪ್ರವಚನ ಸೇವೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿದಿನ ಬೆಳಿಗ್ಗೆ ಮಠದ ಸ್ವರ್ಣಮಂಟಪದಲ್ಲಿ ಶ್ರೀ ಪೂಜೆ , ಶ್ರೀ ಕರಾರ್ಚಿತ ಸನ್ನಿಧಿಗಳಿಗೆ ಮಹಾಸಪರ್ಯಾ , ಶ್ರೀ ದುರ್ಗಾಪೂಜೆ , ಶ್ರೀ ದುರ್ಗಾಸಪ್ತಶತೀ ಪಾರಾಯಣ, ಶ್ರೀ ದೇವೀ ಭಜನೆ, ಮಾತೆಯರಿಂದ ಕುಂಕುಮಾರ್ಚನೆ ಹಾಗೂ ಸ್ವರ್ಣಪಾದುಕಾ ಪೂಜೆ ನಡೆಯಲಿದ್ದು, ಅಪರಾಹ್ನ 3.15ರಿಂದ ಶ್ರೀ ಸಂಸ್ಥಾನದವರಿAದ ಪ್ರವಚನ ನೇರವೇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅ.24ರ ಮಂಗಳವಾರ ವಿದ್ಯಾದಶಮಿಯಂದು ಶ್ರೀ ಸಂಸ್ಥಾನದವರ (ಆಶೀರ್ವಚನ ಮಂತ್ರಾಕ್ಷತೆ) ಆಶೀರ್ಮಂತ್ರಾಕ್ಷತೆ ಹಾಗೂ ಸ್ವರ್ಣಭಿಕ್ಷಾಸೇವೆ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭತರೆಲ್ಲರೂ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗುವಂತೆ ಮಠದ ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಕ್ರಯಾ ಸಮಿತಿ ಹಾಗೂ ಮಹಾಸಮಿತಿ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.