ಪುತ್ತೂರು : ಗ್ರಾಮಾಂತರ ಠಾಣಾ ಎಸ್.ಐ. ಅಬ್ದುಲ್ ಖಾದರ್ ವಿರುದ್ಧವಾಗಿ ದೂರು ನೀಡದ ವ್ಯಕ್ತಿ ವಿಚಾರಣೆಗೆ ಕೋರ್ಟಿಗೆ ಹಾಜರಾಗಿದ್ದ ಸಂದರ್ಭದಲ್ಲಿ ಅಸ್ವಸ್ಥರಾದ ಘಟನೆ ವರದಿಯಾಗಿದೆ. ಕಾದರ್ ಪುತ್ತೂರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಂಡ್ರೋ ಪಾಲ್ ಅನ್ನುವ ಅಂಗವಿಕಲ ವ್ಯಕ್ತಿಗೆ ಕೆಲವರು ಹಲ್ಲೆ ನಡೆಸಿದ್ದರು ಎಂಬುದಾಗಿ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದರು. ಠಾಣೆಗೆ ಆಂಡ್ರೋ ಪಾಲ್ ಆಗಮಿಸಿದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾದರ್ ಇನ್ನು ಮುಂದೆ ಠಾಣೆಗೆ ಬರಬಾರದು ಎಂದು ಬೆದರಿಕೆ ಒಡ್ಡಿ, ಪಾಲ್ ಕುತ್ತಿಗೆ ಪಟ್ಟಿ ಹಿಡಿದು, ಬೂಟಿನಿಂದ ಒದ್ದು, ಅಂಗವಿಕಲ ಎನ್ನುವ ಮಾನವೀತಯೂ ಇಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆಂಡ್ರೋ ಪಾಲ್ ಖಾಸಗಿ ದೂರು ದಾಖಲಿಸಿದ್ದರು. ಅಕ್ಟೋಬರ್ 07 ರಂದು ಪುತ್ತೂರು ಕೋರ್ಟಿಗೆ ವಿಚಾರಣೆಗೆಂದು ಆಗಮಿಸಿದ ಸಂದರ್ಭದಲ್ಲಿ ಅವರು ಕಾಲು ನೋವಿನಿಂದ ಕುಸಿದು ಬಿದ್ದರು, ಈ ಸಂದರ್ಭ ನನ್ನ ಈ ಸ್ಥಿತಿಗೆ ಕಾದರ್ ಕಾರಣ ಎಂದು ಸಾರ್ವಜನಿಕರಲ್ಲಿ ಘಟನೆಯನ್ನು ವಿವರಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೋಯ್ಯಲಾಯಿತು. ಕಾಖಿತೊಟ್ಟು ಸಾಲು ಸಾಲು ಅನ್ಯಾಯ ಎಸಗುತ್ತಿರುವ ಕಾದರ್ ಅವರ ಮತ್ತೊಂದು ಅನ್ಯಾಯ ಎಸಗಿದ ಪ್ರಕರಣ ಈಗ ಬೆಳಕಿಗೆ ಬಂದಿದೆ. ಇಂತಹ ಅಧಿಕಾರಿಗಳ ವಿರುದ್ಧ ಯಾವಾಗ ಕ್ರಮ ಕೈ ಗೊಳ್ಳುತ್ತಾರೋ ದೇವರೇ ಬಲ್ಲ.
ಮೆಲುಕು : ಈ ಹಿಂದೆ ಎಸ್
ಐ. ಅಬ್ದುಲ್ ಖಾದರ್ ಅವರ ವಿರುದ್ದ ಜಾತಿವಾದ ಮತ್ತು ಆರೋಪಿಗಳ ರಕ್ಷಣೆಗೆ ಸಂಬಂಧಿಸಿ ಸಾಕ್ಷ್ಯ ಸಮೇತ ಹಿಂ.ಜಾ.ವೆ. ಮುಖಂಡ ಜಗದೀಶ್ ಕಾರಂತ ಪುತ್ತೂರಿನಲ್ಲಿ ಆರೋಪ ಮಾಡಿದ್ದರು.