Sunday, January 19, 2025
ಸುದ್ದಿ

ತಾಂತ್ರಿಕ ರಹಸ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದಾತನ ಬಂಧನ – ಕಹಳೆ ನ್ಯೂಸ್

ದೆಹಲಿ: ಭಾರತೀಯ ಸೈನ್ಯದ ಹಾಗೂ ತಂತ್ರಜ್ಞಾನದ ಮಾಹಿತಿಯನ್ನು ಶತ್ರು ರಾಷ್ಟ್ರಗಳು ಪಡೆದು ದಾಳಿ ಮಾಡಲು ಯಾವಾಗಲೂ ಹೊಂಚನ್ನು ಹಾಕುತ್ತಿರುತ್ತವೆ. ಅಂತಹದ್ದೇ ಒಂದು ಪ್ರಯತ್ನವನ್ನು ಪಾಕಿಸ್ತಾನ ನಡೆಸಿದ್ದು, ಸೈನ್ಯದ ಅನೇಕ ರಹಸ್ಯಗಳನ್ನು ತಿಳಿದುಕೊಳ್ಳಲು ವಾಮ ಮಾರ್ಗವನ್ನು ತುಳಿದಿದೆ. ಆದರೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಈ ಪ್ರಯತ್ನವನ್ನು ವಿಫಲಗೊಳಿಸಿದೆ.

ಹೌದು, ಸೋಮವಾರ ಭಾರತದ ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಒಬ್ಬ ಉದ್ಯೋಗಿಯನ್ನು ಮಹಾರಾಷ್ಟ್ರದ ನಾಗ್ಪುರ್‍ನಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ಘಟಕದಲ್ಲಿ ಬಂಧಿಸಲಾಗಿದ್ದು, ಕ್ಷಿಪಣಿಯ ಅನೇಕ ತಾಂತ್ರಿಕ ರಹಸ್ಯಗಳನ್ನು ಪಾಕಿಸ್ತಾನಕ್ಕೆ ತಿಳಿಸುತ್ತಿದ್ದ ಎಂಬುದು ಬಂಧನಕ್ಕೆ ಪ್ರಮುಖ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿಶಾಂತ್ ಅಗರ್‍ವಾಲ್ ಎಂಬಾತ ಸೀಕ್ರೆಟ್‍ಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ಶಂಕಿಸಲಾಗಿದೆ. ಈತನ ಕಂಪ್ಯೂಟರ್‍ನಲ್ಲಿ ಪ್ರಮುಖ ರಹಸ್ಯ ಮಾಹಿತಿಗಳು ದೊರೆತಿವೆ. ಅದಲ್ಲದೇ ಪಾಕಿಸ್ತಾನ ಆಧಾರಿತ ಆಪರೇಟರ್ ಜತೆ ನಡೆಸಿದ ಫೇಸ್‍ಬುಕ್ ಚಾಟ್ ಕೂಡ ದೊರೆತಿದೆ ಎಂದು ಭಯೋತ್ಪಾದನಾ ನಿಗ್ರಹ ದಳದ ಐ ಜಿ ಆಸೀಮ್ ಅರುಣ್ ಹೇಳಿದ್ದಾರೆ.