ಹಲ್ಲೆಪ್ರಕರಣ: ಆರೋಪಿಗಳು ದೋಷಮುಕ್ತ – ಕಹಳೆ ನ್ಯೂಸ್
ಪುತ್ತೂರು: ಸುಮಾರು 6 ವರ್ಷಗಳ ಹಿಂದೆ ದಿನಾಂಕ 29/12/2017 ರಂದು ಸಾಯಂಕಾಲ ಕೆಎ 21-ಎಫ್-0074ನೇ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಚಾಲಕರಾದ ರಾಮಕೃಷ್ಣ ರವರ ಜೊತೆ ನಿರ್ವಾಹಕರಾಗಿ ರಿಯಾಜ್ ಮುಲ್ಲಾರ್ ರವರು ಮಂಗಳೂರು ಸ್ಟೇಟ್ ಬ್ಯಾಂಕ್ ನಿಂದ ಹೊರಟು ಪುತ್ತೂರು ಕಡೆಗೆ ಬರುತ್ತಾ 8.30 ಗಂಟೆಗೆ ರಾತ್ರಿ ಪುತ್ತೂರು ತಾಲೂಕು, ಕಬಕ ಗ್ರಾಮದ, ನೆಹರೂ ನಗರ ಎಂಬಲ್ಲಿಗೆ ತಲುಪಿದಾಗ ಕೆಎ19 -ಎಎ- 8887ನೇ ಖಾಸಗಿ ಬಸ್ಸನ್ನು ಅದರ ಚಾಲಕ ಆರೋಪಿ ಪಿ.ಎ ಜೋಯ್ ಎಂಬವರು ಒಮ್ಮೆಲೇ ಬ್ರೆಕ್ ಹಾಕಿ ರಾಮಕೃಷ್ಣ ರವರ ಬಸ್ಸಿಗೆ ಅಡ್ದವಾಗಿ ನಿಲ್ಲಿಸಿದ ಸಮಯ ಚಾಲಕರಾದ ರಾಮಕೃಷ್ಣರವರು ಆರೋಪಿ ಬಸ್ಸಿನ ಚಾಲಕರಲ್ಲಿ “ನಮ್ಮ ಬಸ್ಸಿಗೆ ಯಾಕೆ ಈ ರೀತಿ ಅಡ್ಡ ನಿಲ್ಲಿಸಿದ್ದೀರಿ” ಎಂದು ಕೇಳಿದರು, ಆಗ ಆರೋಪಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ನಿಲ್ಲಿಸಿ ಬಂದು ಬಸ್ಸಿನ ಚಾಲಕರಾದ ರಾಮಕೃಷ್ಣರವರನ್ನು ಉದ್ದೇಶಿಸಿ ಆವಾಚ್ಯ ಶಬ್ದಗಳಿಂದ ಬೈದು ಅವರ ಸಮವಸ್ತçಕ್ಕೆ ಕೈ ಹಾಕಿ ಕೊರಳಪಟ್ಟಿ ಹಿಡಿದು ಎಳೆದರು., ಈ ಸಮಯ ಅರೋಪಿ ಬಸ್ಸಿನ ಚಾಲಕರ ಜೊತೆ ಬಂದ ಇತರ 3 ಮಂದಿ ಸೇರಿಕೊಂಡು ಚಾಲಕ ರಾಮಕೃಷ್ಣರವರ ಕಾಲನ್ನು ತಿರುಚಿ, ಮುಖಕ್ಕೆ ಹೊಡೆದು, ಕಾಲಿನಿಂದ ಹೊಟ್ಟೆಗೆ, ಸೊಂಟಕ್ಕೆ ತುಳಿದಿರುವುದನ್ನು ನೋಡಿದ ನಿರ್ವಾಹಕ ರಿಯಾಜ್ ಮುಲ್ಲಾರ್ ರವರು ಈ ಹಲ್ಲೆಯನ್ನು ತಡೆದಾಗ ಆರೋಪಿಗಳು “ಇನ್ನು ಮುಂದಕ್ಕೆ ಈ ಮಾರ್ಗದಲ್ಲಿ ಬಸ್ಸ್ ಚಲಾಯಿಸಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಮತ್ತು ನಮ್ಮ ಕರ್ತವ್ಯಕ್ಕೆ ಅಡ್ಡಿಯಾಗಿದೆ ಎಂದು ಆರೋಪ ಮಾಡಿ ರಿಯಾಜ್ ಮುಲ್ಲಾರ್ ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು ಮತ್ತು ಆರೋಪಿಗಳ ವಿರುದ್ಧ ನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 341,504,506,332,353, ಜೊತೆಗೆ 34 ಕಾಯ್ದೆಯನ್ವಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸಿ ಪಿ.ಎ ಜೋಯ್, ಧನು ಅಲಿಯಾಸ್ ಧನಂಜಯ, ಇಬ್ರಾಹಿಂ ಎಂಬವರ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಸದ್ರಿ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು ಸುಮಾರು 14 ಸಾಕ್ಷಿಗಳ ಪೈಕಿ 13 ಸಾಕ್ಷಿಗಳನ್ನು ತನಿಖೆ ನಡೆಸಿ, ಸುಮಾರು 14 ದಾಖಲೆಗಳನ್ನು ಅಭಿಯೋಜನ ಪರ ಗುರುತಿಸಲ್ಪಟ್ಟಿತ್ತು, ಮತ್ತು ಅಂತಿಮವಾಗಿ 2ನೇ ಮತ್ತು 3ನೇ ಆರೋಪಿಗಳ ಪರ ವಕೀಲರು, ಆರೋಪಿ ಧನಂಜಯ ಮತ್ತು ಇಬ್ರಾಹಿಂ ಹೆಸರುಗಳೇ ಪ್ರಥಮ ವರ್ತಮಾನ ವರದಿಯಲ್ಲಿ ಕಂಡುಬರುವುದಿಲ್ಲ. ಆರೋಪಿಗಳ ಸಂಖ್ಯೆ ಒಮ್ಮೆ 3, ಒಮ್ಮೆ 4, ಮತ್ತು ಒಮ್ಮೆ 5 ಎಂದು ಬೇರೆ ಬೇರೆ ರೀತಿಯಾಗಿ ಹೇಳಿರುತ್ತಾರೆ. ಆರೋಪಿಗಳ ಚಹರೆಯ ಬಗ್ಗೆ ಎಲ್ಲೋ ವಿವರ ಇರುವುದಿಲ್ಲ, ಮತ್ತು ಅವರ ಗುರುತಿಸುವ ಬಗ್ಗೆ ಯಾವುದೇ ಕವಾಯತು ಮಾಡಿರುವುದಿಲ್ಲ. ಯಾವ ಆಧಾರದಲ್ಲಿ ಈ ಕೇಸಿನಲ್ಲಿ ಅವರನ್ನು ಸೇರಿಸಲ್ಪಟ್ಟಿದೆ ಎಂಬುವುದಕ್ಕೂ ಸೂಕ್ತವಾದಂತಹ ಮಾಹಿತಿ ಇಲ್ಲ. ಅದೇ ಪ್ರಕಾರ ಆರೋಪಿಗಳ ಬಂದಿಸಿದ ನಂತರ ಅವರ ಗುರುತಿಸುವಿಕೆಯ ಬಗ್ಗೆ ರಿಯಾಜ್ ಮುಲ್ಲಾರ್ ರವರು ಹೇಳಿದಂತೆ ಕಂಡು ಬರುತ್ತದೆ. ಇದಕ್ಕೆಲ್ಲ ಕಲಶಪ್ರಾಯವಾಗಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ರಾಮಕೃಷ್ಣ ರವರು ಘಟನೆ ನಡೆದಿದೆ ಎನ್ನಲಾದ ಸಮಯ ಕರ್ತವ್ಯದಲ್ಲಿ ಇದ್ದರು ಎಂಬುವುದರ ಬಗ್ಗೆ ಸೂಕ್ತ ದಾಖಲಾತಿಗಳು ಇರುವುದಿಲ್ಲ, ಎಂಬುದಾಗಿ ವಾದಿಸಿದ್ದರು. ಸರ್ಕಾರಿ ಅಭಿಯೋಜಕರ ಮತ್ತು 2ನೇ ಮತ್ತು 3ನೇ ಅರೋಪಿಗಳ ಪರ ಹಿರಿಯ ವಕೀಲರಾದ ಕಜೆ ಲಾ ಚೇಂಬರ್ಸ್ನ ಶ್ರೀಯುತ ಮಹೇಶ್ ಕಜೆ ಮತ್ತು 1ನೇ ಆರೋಪಿ ಪರ ವಕೀಲರಾದ ಮಾಧವ ಪೂಜಾರಿಯವರ ವಾದ ವಿವಾದಗಳನ್ನು ಅಲಿಸಿದ ನಂತರ ಸದ್ರಿ ಅಭಿಯೋಜನ ಪರ ದಾಖಲೆಗಳನ್ನು ಪರಿಶೀಲಿಸಿ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸ0ಶಯಾತೀತವಾಗಿ ಸಾಭೀತುಪಡಿಸಲು ವಿಫಲವಾಗಿದೆ ಎ0ದೂ ತೀರ್ಮಾನಿಸಿ ಮಾನ್ಯ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಪುತ್ತೂರು ದ.ಕದ ನ್ಯಾಯಾಧೀಶರಾದ ಶ್ರೀಯುತ ಗೌಡ ಆರ್.ಪಿ ರವರು ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಿ ಆದೇಶಿಸಿರುತ್ತಾರೆ.
You Might Also Like
ದಕ್ಷಿಣ ಕನ್ನಡ ಜಿಲ್ಲೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ.) ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿದ ಶಾಸಕ ವೇದವ್ಯಾಸ್ ಕಾಮತ್-ಕಹಳೆ ನ್ಯೂಸ್
ದಕ್ಷಿಣ ಕನ್ನಡ ಜಿಲ್ಲೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ.) ವತಿಯಿಂದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ...
ಕತಾರಿನಲ್ಲಿ ಭಾರತೀಯರಿಂದ ಆಯುರ್ವೇದ ದಿನಾಚರಣೆ-ಕಹಳೆ ನ್ಯೂಸ್
ಭಾರತೀಯ ದೂತವಾಸದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು ಆಯುರ್ವೇದ ದಿನಾಚರಣೆಯನ್ನು ಆಚರಿಸಿತು. ಭಾರತೀಯ ದೂತವಾಸದ ಉಪಮುಖ್ಯಸ್ಥರಾದ ಶ್ರೀ ಸಂದೀಪ್ ಕುಮಾರ್ ಈ ಕಾರ್ಯಕ್ರಮದ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು....
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಫುಡ್ ಫೆಸ್ಟ್-ಕಹಳೆ ನ್ಯೂಸ್
ಪುತ್ತೂರು; ದೂರದೃಷ್ಟಿ, ಕಠಿಣ ಪರಿಶ್ರಮಗಳೇ ಯಶಸ್ಸಿನ ಮೆಟ್ಟಿಲು. ಅವಕಾಶಗಳು ಸಿಕ್ಕಾಗಲೆಲ್ಲಾ ನಿಮ್ಮ ಗುರಿಯನ್ನು ತಲುಪಲು ಅವುಗಳನ್ನು ಬಳಸಿಕೊಳ್ಳಿ’ ಎಂದು ಮಂಗಳೂರಿನ ವಾಣಿಜ್ಯೋದ್ಯಮಿ ಶ್ರೀ ವಿಜಿತ್ ಶೆಟ್ಟಿ ಅವರು...
ಸುಬ್ರಹ್ಮಣ್ಯದ ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲ್ ವಿಕ್ರಂ ಗೌಡ ಮತ್ತು ತಂಡ-ಕಹಳೆ ನ್ಯೂಸ್
ಉಡುಪಿ: ಕಾಡಿನಲ್ಲಿಯೇ ಸುತ್ತಾಡುವ ನಕ್ಸಲರು ಕೆಲವು ಸಮಯದ ಹಿಂದೆ ರೈಲಿನ ಮೂಲಕ ಪ್ರಯಾಣಿಸಿದ್ದರು ಎಂಬ ಮಾಹಿತಿ ಈಗ ಹೊರಗೆ ಬಿದ್ದಿದೆ. ಎನ್ಕೌಂಟರ್ಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡ ಮತ್ತು ತಂಡ ಸುಬ್ರಹ್ಮಣ್ಯದಿಂದ ಮುರ್ಡೇಶ್ವರ ವರೆಗೆ ರೈಲಿನಲ್ಲಿ ಹೋಗಿ ಅನಂತರ ಕಾಡು ಹಾದಿ ಹಿಡಿದಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಲೋಕಸಭೆ ಚುನಾವಣೆ ಸನಿಹದಲ್ಲಿ ಎಲ್ಲೆಡೆ ಹೆಚ್ಚುವರಿ ಭದ್ರತೆ ಇದ್ದುದರಿಂದ ದಕ್ಷಿಣ ಕನ್ನಡ, ಕೊಡಗು ಗಡಿಭಾಗ ಕೂಜುಮಲೆ, ಕಡಮಕಲ್ಲು , ಸುಬ್ರಹ್ಮಣ್ಯ, ಬಿಳಿನೆಲೆ ಭಾಗದಲ್ಲಿ ಹೆಚ್ಚಿನ ದಿನಗಳನ್ನು ನಕ್ಸಲರು ಕಳೆದಿದ್ದರು. ಈ ವೇಳೆ ಇಲ್ಲಿನ ಅರಣ್ಯದಂಚಿನ ಮನೆಗಳಿಗೆ ಭೇಟಿ ನೀಡಿ ದಿನಸಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೊಂಡೊಯ್ದಿದ್ದರು. ಅಲ್ಲಿಂದ ಪಕ್ಕದ ಸುಬ್ರಹ್ಮಣ್ಯ ಕ್ರಾಸಿಂಗ್ ರೋಡ್(ನೆಟ್ಟಣ) ರೈಲು ನಿಲ್ದಾಣಕ್ಕೆ ಆಗಮಿಸಿ ರೈಲಿನ ಮೂಲಕ ಮುರ್ಡೇಶ್ವರ ಕಡೆಗೆ ಪ್ರಯಾಣಿಸಿದ್ದರು. ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ಇಳಿದು ಕಾಡು ಹತ್ತಿದ್ದ ಅವರು ಕೊಲ್ಲೂರು...