Thursday, January 23, 2025
ರಾಷ್ಟ್ರೀಯಸುದ್ದಿ

ನಾಳೆಯಿಂದ ಪುಣೆಯಲ್ಲಿ ಆರ್‌ಎಸ್‌ಎಸ್‌ ಸಮನ್ವಯ ಸಮಿತಿ ಸಭೆ ; ವಕ್ತಾರ ಸುನೀಲ್‌ ಅಂಬೇಕರ್‌ ಸುದ್ದಿಗೋಷ್ಠಿ – ಕಹಳೆ ನ್ಯೂಸ್

ಪುಣೆ: ಆರ್‌ಎಸ್‌ಎಸ್‌ನ ಸಮನ್ವಯ ಸಮಿತಿ ಸಭೆ ಪುಣೆಯಲ್ಲಿ ಸೆ.15ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಅದರಲ್ಲಿ ಸಂಘಟನೆಯ 36 ವಿಭಾಗಗಳ 266 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ವಕ್ತಾರ ಸುನೀಲ್‌ ಅಂಬೇಕರ್‌ ಬುಧವಾರ ತಿಳಿಸಿದ್ದಾರೆ. ದೇಶದಲ್ಲಿ ಸದ್ಯ ಇರುವ ಪರಿಸ್ಥಿತಿಯ ಬಗ್ಗೆ ನಾಯಕರು ಪರಾಮರ್ಶೆ ನಡೆಸಲಿದ್ದಾರೆ.

ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಕೂಡ ಭಾಗವಹಿಸಲಿದ್ದಾರೆ ಎಂದರು. ವರ್ಷಾಂತ್ಯದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ವರ್ಷದ ಏಪ್ರಿಲ್‌-ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು