Sunday, November 24, 2024
ಸುದ್ದಿ

ಸೆ. 19ರ ಗಣೇಶ ಚತುರ್ಥಿ ಹಬ್ಬವನ್ನ ಶಾಂತಿಯುತವಾಗಿ ಆಚರಿಸುವ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸಮಾಜದ ಪ್ರಮುಖರ ಜೊತೆ ಸಭೆ – ಕಹಳೆ ನ್ಯೂಸ್

ಬಂಟ್ವಾಳ : ಸೆ. 19 ರಂದು ನಡೆಯಲಿರುವ ಗಣೇಶ್ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಶಾಂತಿಯುತವಾಗಿ ಆಚರಿಸುವ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಎಸ್.ಐ.ಹರೀಶ್ ನೇತ್ರತ್ವದಲ್ಲಿ ಸಮಾಜದ ಪ್ರಮುಖರ ಸಭೆ ನಡೆಸಿದರು.

ಆಚರಣೆ ಸಂದರ್ಭದಲ್ಲಿ ಮಾಡಬೇಕಾಗದ ಸರಕಾರದ ನಿಯಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು. ತಾಲೂಕಿನಲ್ಲಿ ನಡೆಯುವ ಗಣೇಶ್ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವುದು ಕಂಡು ಬಂದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಸಿದ್ದವಿದೆ. ಅಂತಹ ಸಂಗತಿಗಳು ಕಂಡುಬAದರೆ ಪೋಲೀಸ್ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯಲ್ಲಿ ಗಣೇಶನ ಹಬ್ಬದ ವಿವಿಧ ಕಾರ್ಯಗಳು ಶಾಂತಿಯುತವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ರಾತ್ರಿ 10 ಗಂಟೆಯ ಒಳಗೆ ಪ್ರತಿ ದಿನದ ಕಾರ್ಯಕ್ರಮ ಮುಗಿಸಬೇಕು ಎಂದು ತಿಳಿಸಿದರು.
ಗಣೇಶನ ವಿಗ್ರಹವನ್ನು ಇಡುವ ಚೌಕಿ ಅಥವಾ ಸಭಾ ವೇದಿಕೆಯ ಲ್ಲಿ ರಾತ್ರಿ ಪಾಳಿಯಲ್ಲಿ ಸ್ವಯಂ ಸೇವಕರು ಕಾಯಬೇಕು. ಗಣೇಶ ಹಬ್ವಕ್ಕೆ ಶುಭಕೋರುವ ಬ್ಯಾನರ್ ಗಳನ್ನು ಹಾಕಿದರೆ ಎಲ್ಲೂ ಕೂಡ ಯಾವುದೇ ವಿವಾದವಾಗದಂತೆ ಜವಬ್ದಾರಿ ವಹಿಸಬೇಕು.
ಪಂಚಾಯತ್ ನಿಂದ,ಮೆಸ್ಕಾA, ಅಗ್ನಿಶಾಮಕ ದಳದ ಅನುಮತಿ ಯನ್ನು ಪಡೆದುಕೊಳ್ಳಿ, ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ತಾತ್ಕಾಲಿಕ ಸಿಸಿ.ಟಿ.ವಿ ಅಳವಡಿಸಿ, ಮೆರವಣಿಗೆ ವೇಳೆ ಡಿ.ಜೆ.ಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಪರಾಧ ವಿಭಾಗದ ಎಸ್.ಐ.ಮೂರ್ತಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು