ಪೊಲೀಸ್ ಜೀಪ್ ಇಳಿಯುತ್ತಲೇ ಸ್ಪೋಟಕ ಹೇಳಿಕೆ ನೀಡಿದ ಚೈತ್ರಾ! ಸ್ವಾಮೀಜಿ ಸಿಕ್ಕಿ ಹಾಕಿಕೊಂಡ ನಂತರ ದೊಡ್ಡ ದೊಡ್ಡವರ ಹೆಸರುಗಳು ಹೊರ ಬರುತ್ತವೆ – ಕಹಳೆ ನ್ಯೂಸ್
ಬಳ್ಳಾರಿ ಜಿಲ್ಲೆಯ ಹಡಗಲಿಯ ಹಾಲಶ್ರೀ ಸ್ವಾಮೀಜಿಗೆ ಪ್ರಧಾನಿ ಕಚೇರಿಯ ಸಂಪರ್ಕವಿದೆ ಎಂದು ಗೋವಿಂದ ಬಾಬು ಪೂಜಾರಿ ಅವರಿಂದ ಒಂದೂವರೆ ಕೋಟಿ ಹಣ ಹಾಕಿಸಲಾಗಿದೆ. ಗೋವಿಂದ ಪೂಜಾರಿ ಜೊತೆಯಲ್ಲಿ ಚೈತ್ರಾ ಸಹ ಹಡಗಲಿಗೆ ತೆರಳಿ ಸ್ವಾಮೀಜಿಯನ್ನು ಭೇಟಿಯಾಗಿರುವ ಮಾಹಿತಿ ಲಭ್ಯವಾಗಿದೆ.
10 ದಿನ ಸಿಸಿಬಿ ಕಸ್ಟಡಿಗೆ
ಚೈತ್ರಾ ಕುಂದಾಪುರ ಸೇರಿ 6 ಆರೋಪಿಗಳನ್ನು ಸೆಪ್ಟೆಂಬರ್ 23ವರೆಗೆ ಸಿಸಿಬಿ ಕಸ್ಟಡಿಗೆ (CCB Custody) ನೀಡಲಾಗಿದೆ. ನಿನ್ನೆ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಹಾಜರು ಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು, 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದರು. ಇಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ಆರೋಪಿಗಳನ್ನ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮಾಡಲಾಗುತ್ತದೆ. ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಚೈತ್ರಾ ಕುಂದಾಪುರ ಆಂಡ್ ಗ್ಯಾಂಗ್ ವಿಚಾರಣೆ ನಡೆಯಲಿದೆ.
ನಕಲಿ ಕೇಂದ್ರ ನಾಯಕರ ಸೃಷ್ಟಿ
ಇನ್ನು ಚೈತ್ರಾ ಕುಂದಾಪುರ ಮೋಸ ಮಾಡುವ ಉದ್ದೇಶದಿಂದಲೇ ಮೂವರನ್ನು ಕೇಂದ್ರ ನಾಯಕರು ಎಂದು ಸೃಷ್ಟಿಸಿ ಉದ್ಯಮಿಯಿಂದ ಹಣ ಪೀಕಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಾಗಿದೆ.
ಸಿನಿಮೀಯ ರೀತಿಯಲ್ಲಿ ವಶಕ್ಕೆ
ಮೋಸಕ್ಕೆ ಒಳಗಾದ ಉದ್ಯಮಿ ಸೆಪ್ಟೆಂಬರ್ 8ರಂದು ಚೈತ್ರಾ ಕುಂದಾಪುರ ವಿರುದ್ಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿತ್ತು.
ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.