Wednesday, January 22, 2025
ಸುದ್ದಿ

ಭಾರತ ಸರ್ಕಾರ ಪೂರೈಸಿದ ಕ್ರೀಡಾ ಸಲಕರಣೆಗಳನ್ನು ಸಂಘ ಸಂಸ್ಥೆಗಳಿಗೆ ವಿತರಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ – ಕಹಳೆ ನ್ಯೂಸ್

ಸುರತ್ಕಲ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆಯ 2022-23ನೇ ಸಾಲಿನ ಜಿಲ್ಲಾ ಪಂಚಾಯತ್ ವತಿಯಿಂದ ಭಾರತ ಸರ್ಕಾರ ಪೂರೈಸಿದ ಕ್ರೀಡಾ ಸಾಮಗ್ರಿ ಮತ್ತು ಸಲಕರಣೆಯನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸುರತ್ಕಲ್ ನಲ್ಲಿ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಯುವ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರಕಾರ ಸಲಕರಣೆ ವಿತರಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ಯುವ ಜನತೆ ಬೆಳೆದು ಬರಬೇಕಿದೆ .ಈಗಾಗಲೇ ಕಬಡ್ಡಿ,ಖೋ ಖೋ,ಓಟ ಮತ್ತಿತರ ಸ್ಪರ್ಧೆಯಲ್ಲಿ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜಿಲ್ಲೆಯ ಕ್ರೀಡಾಗಳು ಹೆಸರು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ವಿವಿಧ ಕ್ರೀಡೆಗೆ ಸಂಬಂಧಿಸಿದಂತೆ ವಾಲಿಬಾಲ್ ಮೌಲ್ಡಡ್, ಥ್ರೋ ಬಾಲ್, ವಾಲಿಬಾಲ್ ನೆಟ್, ಥ್ರೋಬಾಲ್ ನೆಟ್, ಕಿಟ್ ಬ್ಯಾಗ್, ಚೆಸ್ ಸೆಟ್,ಟೆನ್ನಿ ಕಾಯ್ಟ್ ರಿಂಗ್, ಕ್ರಿಕೆಟ್ ಸೆಟ್, ಶಾಟ್ ಪುಟ್, ಯೋಗ ಮ್ಯಾಟ್ ಮತ್ತಿತರ ಸಾಮಗ್ರಿಗಳನ್ನು ಉತ್ತರ ಕ್ಷೇತ್ರ ವ್ಯಾಪ್ತಿಯ ಐದು ಅರ್ಹ ಸಂಘ ಸಂಸ್ಥೆಗಳಿಗೆ ವಿತರಿಸಲಾಯಿತು. ಈ ಸಂದರ್ಭ ಮ.ನ.ಪಾ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.