Thursday, January 23, 2025
ಸುದ್ದಿ

ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ನಡೆದ 6ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ರಾಷ್ಟ್ರಿಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್-2023ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಅವಿನಾಶ್ ಕುಮಾರ್ ವಿ ಶೆಟ್ಟಿ ಅವರಿಗೆ ಸನ್ಮಾನ – ಕಹಳೆ ನ್ಯೂಸ್

ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಪಂಜಾಬ್ ಜಲಂಧರ್ ಲವಿ ಪ್ರೊಫೆಷನ್ ಯೂನಿವರ್ಸಿಟಿಯಲ್ಲಿ ನಡೆದ ರಾಷ್ಟ್ರಿಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್ -2023ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಅವಿನಾಶ್ ಕುಮಾರ್ ವಿ ಶೆಟ್ಟಿ ಮೂಡಬೆಟ್ಟು ಇವರನ್ನು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ನಡೆದ 6ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇವರು ಪೋರ್ಚ್ ಗಲ್ಲ್ ನಲ್ಲಿ ನಡೆಯುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ವಿನಯ್ ಬಲ್ಲಾಳ್, ಅಶೋಕ್ ರಾವ್ ಸದಸ್ಯರಾದ ಸುಭಾಸ್ ಬಲ್ಲಾಳ್, ಸವಿತ ಶೆಟ್ಟಿ, ಸುಜಲ ಪೂಜಾರಿ, ಪವಿತ್ರ ಶೆಟ್ಟಿ, ಉದ್ಯಮಿ ಮಹೇಶ್ ಬಿ ಶೆಟ್ಟಿ, ಉದಯ ಹೆಗ್ಡೆ, ಭಾಸ್ಕರ್ ಕೋಟ್ಯಾನ್, ದೇವಸ್ಥಾನದ ಅರ್ಚಕರಾದ ವಿಶ್ವೋತ್ತಮ ಆಚಾರ್ಯ, ಭಜನಾ ಮಂಡಳಿಯ ಸದಸ್ಯರಾದ ಧೀರಜ್ ಕೋಟ್ಯಾನ್, ನಿತಿನ್ ವಿ ಶೇರಿಗಾರ್ ಸಂತೋಷ್ ದೇವಾಡಿಗ, ಮುರಳಿಧರ್ ಜಿ ಎನ್ ಅರ್ಪಿತ್ ಶೆಟ್ಟಿ, ಪ್ರತಿಕ್ ಶೆಟ್ಟಿ, ನಿತೇಶ್, ಶಶಿಧರ್, ಪ್ರಶಾಂತ್ ಅಭಿಷೇಕ್ ವಿನೋದ ಟೀಚರ್ ಮೊದಲಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು