Thursday, January 23, 2025
ಸುದ್ದಿ

ರಿಕ್ಷಾ, ಟೆಂಪೊ, ಲಾರಿ ನಡುವೆ ಭೀಕರ ಅಪಘಾತ ; ಮೂವರಿಗೆ ಗಾಯ– ಕಹಳೆ ನ್ಯೂಸ್

ಬೆಳ್ತಂಗಡಿ: ರಿಕ್ಷಾ, ಟೆಂಪೊ, ಲಾರಿಗಳ ನಡುವೆ ಭೀಕರ ಅಪಘಾತ ಮೂವರು ಗಾಯಗೊಂಡ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ 73ರ ಉಜಿರೆ ಸಮೀಪದ ಟಿಬಿ ಕ್ರಾಸ್ ಬಳಿಯ ನಡೆದಿದೆ.


ಬೆಳ್ತಂಗಡಿ ಯಿಂದ ಉಜಿರೆ ಕಡೆಗೆ ಹೋಗುತ್ತಿದ್ದ ವೇಳೆ ಆಟೋ ರಿಕ್ಷಾದ ಮುಂದೆ ಇದ್ದ ಲಾರಿಯೊಂದು ಬ್ರೇಕ್ ಹಾಕಿ ನಿಲ್ಲಿಸಿದ ಕಾರಣ ರಿಕ್ಷಾವನ್ನೂ ನಿಲ್ಲಿಸಬೇಕಾಯಿತು. ಆದರೆ ದುರದೃಷ್ಟವಷಾತ್ ಹಿಂದಿನಿAದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಢಿಕ್ಕಿ ಹೊಡಿದಿದೆ. ಎರಡೂ ಲಾರಿಗಳ ಮಧ್ಯೆ ಸಿಲುಕಿಕೊಂಡ ಆಟೋ ರಿಕ್ಷಾ ಸಂಪೂರ್ಣ ಹಾನಿಗೊಳಗಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಿಕ್ಷಾ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು