Thursday, January 23, 2025
ಸುದ್ದಿ

ಬೆಳ್ತಂಗಡಿಯಲ್ಲಿ ಪಶುವೈದ್ಯಾಧಿಕಾರಿಯ ಬೈಕ್ ಕಳವು; ದೂರು ದಾಖಲು

ಬೆಳ್ತಂಗಡಿ : ಪಶುವೈದ್ಯಾಧಿಕಾರಿ ಅವರ ಶೆಡ್‌ನಲ್ಲಿ ನಿಲ್ಲಿಸಿದ್ದ ಬೈಕ್‌ನ್ನು ಕಳವು ಮಾಡಿದ ಘಟನೆ ಸೆ. 12ರಂದು ನಡೆದಿದೆ.


ಬೆಳ್ತಂಗಡಿ ಪಶುವೈದ್ಯಾಧಿಕಾರಿ ಡಾ| ಟಿ.ಸಿ.ಮಂಜಾ ನಾಯ್ಕ ಎಂದಿನoತೆ ಪಶು ಆಸ್ಪತ್ರೆಯ ಶೆಡ್‌ನಲ್ಲಿ ಬೈಕ್ ನಿಲ್ಲಿಸಿ ತೆರಳಿದ್ದರು. ಮುಂಜಾನೆ ಬೈಕ್‌ನಲ್ಲಿರಿಸಿದ್ದ ಕೀ ಕಾಣೆಯಾಗಿತ್ತು. ಕೀ ಕಳೆದುಹೋಗಿರಬಹುದೇನೋ ಎಂದು ಅನುಮಾನಗೊಂಡಿದ್ದರು. ಆದರೆ ರಾತ್ರಿ ಬಂದು ನೋಡಿದಾಗ ಬೈಕ್ ಕಾಣೆಯಾಗಿರುವುದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೈಕಿನ ಮೌಲ್ಯ 35,000 ರೂ. ಎಂದು ಅಂದಾಜಿಸಲಾಗಿದ್ದು, ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು