ಪುತ್ತೂರು : ಸಂಪ್ಯ ನವಚೇತನಾ ಯುವಕ ಮಂಡಲ (ರಿ.) ವತಿಯಿಂದ ಸೆ.19ರಿಂದ 20ರವರೆಗೆ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಸೆ.19ರ ಬೆಳಿಗ್ಗೆ 9.00ಗಂಟೆಗೆ ಆರ್ಯಾಪು ಕಾರ್ಪಾಡಿಯ ಅರ್ಚಕರಾದ ವೇದಮೂರ್ತಿ ಸಂದೀಪ ಕಾರಂತ ಅವರ ಉಪಸ್ಥಿತಿಯಲ್ಲಿ ಶ್ರೀ ಗಣೇಶ ದೇವರ ಪ್ರತಿಷ್ಠಾಪನೆಗೊಂಡು, ಗಣಹೋಮ ಹಾಗೂ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಸ್ಪರ್ದೆ ನಡೆಯಲಿದೆ.
ಮಧ್ಯಾಹ್ನ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿಯರ್ ಹಾಗೂ ದೈವ ನರ್ತಕರು ಆಗಿರುವ ರವೀಶ ಪಡುಮಲೆ ಅವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಇನ್ನು ವಿ ಝೋನ್ ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಆಗಿರುವ ಪುರಂದರ ರೈ ಮಿತ್ರಂಪಾಡಿ, ಪುತ್ತೂರು ವಿದ್ಯಾಮಾತಾ ಅಕಾಡೆಮಿಯ ಸಂಚಾಲಕರಾದ ಭಾಗ್ಯೇಶ್ ರೈ, ಪುತ್ತೂರು ಬನ್ನೂರು ಸಹಕಾರಿ ಸಂಘದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆರೋಗ್ಯ ವಕ್ಷಾ ಸಮಿತಿಯ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತ, ಸುಳ್ಯ ಕೆವಿಜೆ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರಾದ ವೇಣುಗೋಪಾಲ, ಪ್ರಗತಿಪರ ಕೃಷಿಕರಾದ ದಯಾನಂದ ಗೌಡ ಕುಂಟ್ಯಾನ ಬಾರಿಕೆ, ಆರ್ಯಾಪು ನೇರಳಕಟ್ಟೆಯ ಶ್ರೀ ಅಮ್ಮನವರ ದೇವಸ್ಥಾನದ ಸುರೇಶ ಪಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸೆ.20ರಂದು ಬೆಳಿಗ್ಗೆ ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ನಡೆದು ಬಳಿಕ, ಶ್ರೀಮತಿ ಪದ್ಮಾ ಕೆ ಆರ್ ಆಚಾರ್ಯ ಅವರ ಸಾರಥ್ಯದಲ್ಲಿ ಪುತ್ತೂರು ತೆಂಕಿಲದ ಧೀಃ ಶಕ್ತಿ ಮಹಿಳಾ ಯಕ್ಷಬಳಗದವರಿಂದ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದು, ಬಳಿಕ ಸಂಜೆ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಿಂದ ಅದ್ಧೂರಿ ಶೋಭಾಯಾತ್ರೆಯಲ್ಲಿ ದೇವರ ಮೆರವಣಿಗೆ ಹೊರಟು ಮುಕ್ರಂಪಾಡಿ ಮೂಲಕ ಮೊಟ್ಟೆತ್ತಡ್ಕ ಮಾರ್ಗವಾಗಿ ಸಂಪ್ಯಕ್ಕೆ ಬಂದು ಸಂಪ್ಯ ಕೆರೆಯಲ್ಲಿ ಗಣೇಶನ ವಿಗ್ರಹ ಜಲಸ್ಥಂಬನಗೊಳ್ಳಲಿದೆ.