ರಸ್ತೆಗೆ ಹರಿಯುತ್ತಿದ್ದ ರಕ್ತ ಮಿಶ್ರಿತ ಕೊಳಚೆ ನೀರಿಗೆ ಪುರಸಭೆ ಅಧಿಕಾರಿಗಳಿಂದ ಶಾಶ್ವತ ಪರಿಹಾರ – ಕಹಳೆ ನ್ಯೂಸ್
ಮೂಡುಬಿದಿರೆ : ಇಲ್ಲಿನ ಮಾರ್ಕೆಟ್ ನಲ್ಲಿರುವ ಮಾಂಸದoಗಡಿಗಳಿoದ ಕಡಿದಿರುವ ಕುರಿ, ಕೋಳಿ, ಆಡುಗಳ ರಕ್ತ ಮತ್ತು ಕೊಳಚೆ ನೀರು ಸಾರ್ವಜನಿಕ ರಸ್ತೆಗೆ ಹರಿಯದಂತೆ ಮೂಡುಬಿದಿರೆ ಪುರಸಭೆಯ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಿದ್ದಾರೆ.
ಮಾರ್ಕೆಟಿನಲ್ಲಿ ವ್ಯಾಪಾರ ಮಾಡುತ್ತಿರುವ ಮಾಂಸದoಗಡಿಗಳಿoದ ಕೆಲವು ದಿನಗಳಿಂದ ಕೊಳಚೆ ನೀರು ಸಾರ್ವಜನಿಕ ರಸ್ತೆಗೆ ಹರಿಯುತ್ತಿದ್ದು ಇದರಿಂದ ಓಡಾಡುತ್ತಿರುವ ಪಾದಾಚಾರಿಗಳು ಮತ್ತು ಅಲ್ಲಿಯೇ ಪಕ್ಕದಲ್ಲಿ ಇತರ ವ್ಯಾಪಾರ ನಡೆಸುತ್ತಿರುವ ಅಂಗಡಿಯವರು ತೊಂದರೆಯನ್ನನ್ನುಭವಿಸುತ್ತಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯೂ ಪ್ರಸಾರಗೊಂಡಿತ್ತು. ಇದೀಗ ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಂಡು ರಸ್ತೆಯ ಬದಿಗಳಲ್ಲಿ ಹರಿಯುತ್ತಿದ್ದ ನೀರು ಪೈಪ್ ಮೂಲಕ ಹರಿದು ಹೋಗುವಂತೆ ವ್ಯವಸ್ಥೆಯನ್ನು ಮಾಡಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿರುವ ಮುಖ್ಯಾಧಿಕಾರಿ ಇಂದು ಅವರ ಕಾರ್ಯ ವೈಖರಿಯನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾ ಸಿಬಂದಿ ಸುಧೀಶ್ ಹೆಗ್ಡೆ ಸ್ಥಳದಲ್ಲಿದ್ದರು.