Saturday, January 25, 2025
ಸುದ್ದಿ

ದೇವಾಲಯಗಳ ಆವರಣದ ಸುತ್ತಮುತ್ತ ‘ಸಿಗರೇಟ್,ತಂಬಾಕು,  ಉತ್ಪನ್ನ’ ಮಾರಾಟ, ಬಳಕೆ ನಿಷೇಧ: ರಾಜ್ಯ ಸರ್ಕಾರ ಚಿಂತನೆ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದ ದೇವಾಲಯಗಳ ಅವರಣದ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳಾದಂತ ಗುಟ್ಕಾ, ಸಿಗರೇಟ್, ಪಾನ್ ಮಸಾಲಾ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವಂತ ದೇವಾಲಯಗಳ ಸುತ್ತಾಮುತ್ತ ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಮಸಾಲಗಳಂತಹ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಶ್ರೀಘ್ರವೇ ಬ್ರೇಕ್ ಬೀಳಲಿದೆ.

ಈ ಸಂಬಂಧ ಅಧಿಕೃತ ಆದೇಶವನ್ನು ಇಲಾಖೆ ಹೊರಡಿಸೋದಕ್ಕೆ ಚಿಂತನೆ ನಡೆಸಿದೆ.

ಈ ನಿಯಮ ಇಲಾಖೆ ವ್ಯಾಪ್ತಿಯಲ್ಲಿ ಇರುವಂತ 33 ಸಾವಿರ ದೇವಾಲಯಗಳಿಗೂ ಅನ್ವಯ ಆಗಲಿದೆ. ದೇವಾಲಯದ ಹೊರ ಭಾಗದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹೆಚ್ಚಾಗಿದ್ದು, ಗುಟ್ಕಾ ತಿಂದು ಕಾಂಪೌಂಡ್ ಸುತ್ತಮುತ್ತ ಉಗಿಯುತ್ತಿರೋದು, ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್ ಬಳಕೆಗೆ ನಿಷೇಧ ವಿದ್ಧರೂ ನಿಯಮ ಅನುಸರಿಸದ ಕಾರಣ, ಸರ್ಕಾರ ಈ ನಿಯಮ ಜಾರಿಗೆ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ.

ಈಗಾಗಲೇ ಶಾಲಾ-ಕಾಲೇಜು ಆವರಣ ವ್ಯಾಪ್ತಿಯ ನೂರು ಮೀಟರ್ ಗಳಲ್ಲಿ ಯಾವುದೇ ಅಂಗಡಿಗಳಲ್ಲಿ ಬೀಡಿ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ ಎಂಬ ಆದೇಶವಿದೆ. ಅದೇ ನಿಯಮವನ್ನು ಧಾರ್ಮಿಕ ತಾಣಗಳಿಗೂ ವಿಸ್ತರಿಸೋದಾಗಿ ಇಲಾಖೆಯ ಉನ್ನತ ಮೂಲದ ಅಧಿಕಾರಿಗಳು ತಿಳಿಸಿದ್ದಾರೆ.