Recent Posts

Tuesday, November 26, 2024
ಸುದ್ದಿ

ಕಬ್ಬಿಣದ ಜಾಕ್ ಮತ್ತು ಪೈಪ್ ಕದ್ದು ತಲೆಮರಿಸಿಕೊಂಡಿದ್ದ ಆರೋಪಿ ಪೊಲೀಸರ ವಶಕ್ಕೆ – ಕಹಳೆ ನ್ಯೂಸ್

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಸಲು ತಂದು ಹಾಕಿರುವ ಸೆಂಟ್ರಿoಗ್ ಶೀಟ್, ಕಬ್ಬಿಣದ ಜಾಕ್ ಮತ್ತು ಪೈಪ್ ಮತ್ತು ಬೆಳುವಾಯಿಯಲ್ಲಿ ಮನೆ ನಿರ್ಮಾಣಕ್ಕೆ ತಂದು ಹಾಕಿರುವ ಶೀಟ್ ಒಟ್ಟು ರೂ 2,50,000 ಮೌಲ್ಯದ ಸೊತ್ತುಗಳನ್ನು ಕದ್ದಿರುವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.


ಮೂಡುಬಿದಿರೆ ತಾಲೂಕಿನ ತೋಡಾರು ನಿವಾಸಿ ಮೊಹಮ್ಮದ್ ಸಾಹಿಲ್ ಬಂಧಿತ ಆರೋಪಿ. ಕಳೆದ ಜೂನ್ ತಿಂಗಳಿನಲ್ಲಿ ಬೆಳುವಾಯಿಯಲ್ಲಿ ನಿರ್ಮಿಸಲು ತಂದು ಹಾಕಿರುವ ಶೀಟ್ ಗಳು ಮತ್ತು ಕೆಸರುಗದ್ದೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಸಲು ತಂದು ಹಾಕಿರುವ ಕಬ್ಬಿಣದ ಜಾಕ್ ಮತ್ತು ಪೈಪ್ ಗಳು ಆಗಸ್ಟ್ ತಿಂಗಳಿನಲ್ಲಿ ಕಳ್ಳತನವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ಧಾರ್ಥ ಮತ್ತು ದಿನೇಶ್ ಕುಮಾರ್, ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ಅವರ ನಿರ್ದೇಶನದಲ್ಲಿ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಉಪ ನಿರೀಕ್ಷಕರಾದ ದಿವಾಕರ ರೈ ಮತ್ತು ಸಿದ್ದಪ್ಪ ನರನೂರ, ಸಿಬಂಧಿಗಳಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಖಿಲ್ ಅಹಮ್ಮದ್ ಮತ್ತು ನಾಗರಾಜ ಅವರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು