Friday, September 20, 2024
ಸುದ್ದಿ

ಪತ್ರಕರ್ತನಾಗಿ ಕ್ಷೇತ್ರಕ್ಕಿಳಿದಾಗ ವರ್ತಮಾನದ ಸವಾಲುಗಳ ಅನುಭವ : ಜಯಶಂಕರ್

ಪುತ್ತೂರು: ಪತ್ರಕರ್ತನಾಗಿ ಕ್ಷೇತ್ರಕ್ಕಿಳಿದಾಗ ವರ್ತಮಾನದ ಸವಾಲುಗಳು ಕಾಡಲಾರಂಭಿಸುತ್ತವೆ. ತರಗತಿಯ ಒಳಗೆ ಕುಳಿತು ನೋಡುವ ಪತ್ರಿಕೋದ್ಯಮಕ್ಕೂ, ಹೊರಗೆ ಕಾಣುವ ಪತ್ರಿಕೋದ್ಯಮಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಗಡುವುಗೆರೆಯ ಮಹತ್ವ ಪತ್ರಕರ್ತರಾದಾಗ ಸರಿಯಾಗಿ ಅರ್ಥವಾಗುತ್ತದೆ. ನಮ್ಮನ್ನು ನಾವು ಎಷ್ಟು ವೇಗವಾಗಿ ರೂಪಿಸಿಕೊಳ್ಳುತ್ತೇವೆ ಎನ್ನುವುದು ಪತ್ರಿಕೋದ್ಯಮದಲ್ಲಿ ಮುಖ್ಯವೆನಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ, ಮಡಿಕೇರಿಯ ಪತ್ರಕರ್ತ ಜಯಶಂಕರ್ ಜೆ ಹೇಳಿದರು.

ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ದಿನವೂ ಹೊಸ ಹೊಸ ಸವಾಲುಗಳು ನಮ್ಮನ್ನು ಕಾದಿರುತ್ತವೆ. ಅವುಗಳನ್ನು ಹೇಗೆ ಎದುರಿಸುತ್ತೆವೆ ಮತ್ತು ಆ ಕ್ಷಣದಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತೆವೆ ಎನ್ನುವುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತೇದೆ. ಪತ್ರಿಕೋದ್ಯಮಕ್ಕೆ ಬರುವವರು ಪತ್ರಿಕಾಲಯಗಳಲ್ಲಿ ಆಂತರಿಕ ತರಬೇತಿ ಪಡೆಯುವುದು ಬಹಳ ಮುಖ್ಯ. ಆಗ ಮುಂದಿನ ದಿನಗಳ ಬಗೆಗೆ ತಕ್ಕಮಟ್ಟಿನ ಜ್ಞಾನ ದೊರೆಯುತ್ತದೆ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತೊರ್ವ ಹಿರಿಯ ವಿದ್ಯಾರ್ಥಿ, ಮಣಿಪಾಲದ ಪತ್ರಕರ್ತ ಕಾರ್ತಿಕ್ ಅಮೈ ಮಾತನಾಡಿ ಬರವಣಿಗೆಯ ಬಗೆಗೆ ಪದವಿ ಹಂತದಲ್ಲಿ ವಿಶೇಷ ಗಮನ ನೀಡಬೇಕು. ಹಾಗೆಯೇ ಪುಟವಿನ್ಯಾಸಗಳಂತಹ ತಂತ್ರಗಾರಿಕೆಗಳನ್ನೂ ರೂಢಿಸಿಕೊಳ್ಳಬೇಕು. ಆ ಅನುಭವಗಳು ಮುಂದಿನ ದಿನಗಳಲ್ಲಿ ಸಹಕಾರಿಯಾಗಲಿವೆ. ನಿಗದಿತ ಸಮಯದೊಳಗೆ ನಿಗದಿಪಡಿಸಲಾದ ಕಾರ್ಯಗಳನ್ನು ಪ್ರತಿದಿನವೂ ಮುಗಿಸಿಕೊಡುವ ಪ್ರಕ್ರಿಯೆ ಸುದ್ದಿಮನೆಯೊಳಗೆ ಜಾರಿಯಲ್ಲಿರುತ್ತದೆ ಎಂದು ನುಡಿದರು.

ಜಾಹೀರಾತು

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.