Friday, September 20, 2024
ಸುದ್ದಿ

ಭಾರತದ ಇತಿಹಾಸಗಳ ಅಧ್ಯಯನ ಲೇಖಕರ ಆದ್ಯ ಕರ್ತವ್ಯ: ಪೂಜಾ.ವೈ.ಡಿ

ಪುತ್ತೂರು: ಕನ್ನಡ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳು ಬೆಳೆದು ಬಂದಿದೆ.ಅದರಲ್ಲಿ ಅನುವಾದವು ಒಂದು. ಬೇರೆ ಭಾಷೆಗಳಿಂದ ಯಾವುದೇ ತಪ್ಪುಗಳಿಲ್ಲದೇ ಅನುವಾದ ಮಾಡಿ ಕೃತಿ ರಚಿಸುವುದು ಕಠಿಣಕರವಾದ ವಿಚಾರ. ಆಳವಾದ ಅಧ್ಯಯನದ ಜೊತೆಗೆ ಓದುಗರ ಮನಮುಟ್ಟುವಂತಹ ಶಬ್ದಗಳನ್ನು ಬಳಸಿ ಭಾಷಾಂತರ ಮಾಡುವುದು ನಿಜವಾದ ಸವಾಲು ಎಂದು ವಿವೇಕಾನಂದ ಕಾಲೇಜಿನ ಹಿಂದಿ ಉಪನ್ಯಾಸಕಿ ಪೂಜಾ.ವೈ.ಡಿ ಹೇಳಿದರು.

ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಕನ್ನಡ ಸಂಘ ಮತ್ತು ತೃತೀಯ ವರ್ಷದ ಐಚ್ಚಿಕ ವಿದ್ಯಾರ್ಥಿಗಳು ಆಯೋಜಿಸುವ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಒಬ್ಬ ಲೇಖಕನು ಉತ್ತಮ ಬರಹಗಾರನಾಗಲು ಆತನಿಗೆ ಇತಿಹಾಸದ ಜ್ಞಾನವಿರಬೇಕು. ಅದೇ ರೀತಿ ಇಂದಿನ ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರದ ಎಲ್ಲಾ ವಿಚಾರಗಳನ್ನು ಸೇರಿಸುವುದು ಅಸಾಧ್ಯದ ವಿಚಾರ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಸ್ವಂತ ಅಧ್ಯಯನದ ಮೂಲಕ ಇತಿಹಾಸದ ಪರಿಚಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ ಎಂದು ನುಡಿದರು.

ಜಾಹೀರಾತು

ಕಾರ್ಯಕ್ರಮದಲ್ಲಿ ಯುವ ಬರಹಗಾರರು ಸ್ಮಿತಾ, ಅಕ್ಷಯ್ ಕುಮಾರ್, ಪ್ರತಿಮಾ ಭಟ್,ಅನುಷಾ ತಮ್ಮ ಸ್ವರಚಿತ ಕವನ ಮತ್ತು ಲೇಖನಗನ್ನು ವಾಚಿಸಿದರು.

ವೇದಕೆಯಲ್ಲಿ ಕನ್ನಡ ಸಂಘದ ಸಂಯೋಜಕಿ ಡಾ.ಗೀತಾ ಕುಮಾರಿ ಟಿ ಮತ್ತು ಸಾಹಿತ್ಯ ಮಂಟಪ ಜೀವಿತಾ ಉಪಸ್ಥಿತರಿದ್ದರು. ತೃತೀಯ ವರ್ಷದ ವಿದ್ಯಾರ್ಥಿನಿ ಧನ್ಯ ಸ್ವಾಗತಿಸಿ ವಿದ್ಯಾರ್ಥಿನಿ ಪುಷ್ಪಾವತಿ ವಂದಿಸಿದರು.ವಿದ್ಯಾರ್ಥಿನಿ ಕಾವ್ಯಶ್ರಿ ಭಟ್ ಕಾರ್ಯಕ್ರಮ ನಿರ್ವಹಿಸಿದರು.